ಕಲ್ಲೇರಿ: ಜನತಾ ಕಾಲನಿ ರಸ್ತೆ ಕಾಂಕ್ರೀಟೀಕರಣಕ್ಕೆ ಶಂಕುಸ್ಥಾಪನೆ

Update: 2019-08-19 17:22 GMT

ಉಪ್ಪಿನಂಗಡಿ: ಗ್ರಾಮೀಣ ಭಾಗದ ಜನರ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್ ಮತ್ತಿತರ ವ್ಯವಸ್ಥೆಗಳನ್ನು ಕಲ್ಪಿಸಲು ಹಂತಹಂತವಾಗಿ ಅನುದಾನ ಬಿಡುಗಡೆಗೊಳಿಸುವುದಾಗಿ ಶಾಸಕ ಹರೀಶ್ ಪೂಂಜಾ ತಿಳಿಸಿದರು.

ಕರಾಯ ಗ್ರಾಮದ ಕಲ್ಲೇರಿ ಜನತಾ ಕಾಲನಿ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದ ಅವರು, ಈಗಾಗಲೇ ಈ ರಸ್ತೆಯಲ್ಲಿ 200 ಮೀ. ಕಾಂಕ್ರೀಟ್ ಕಾಮಗಾರಿಗೆ 9 ಲಕ್ಷ ರೂ. ಬಿಡುಗಡೆಗೊಳಿಸಿದ್ದೇನೆ. ಇನ್ನುಳಿದ ರಸ್ತೆಯ ಶಾಶ್ವತ ಕಾಮಗಾರಿಗೆ ಮುಂದಿನ ದಿನಗಳಲ್ಲಿ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. 

ಈ ಸಂದರ್ಭ ತಣ್ಣೀರುಪಂಥ ಗ್ರಾ.ಪಂ. ಸದಸ್ಯರಾದ ಸೂರಪ್ಪ ಬಂಗೇರ, ರುಕೇಶ್, ಎಪಿಎಂಸಿ ಸದಸ್ಯ ಜಯಾನಂದ ಕಲ್ಲಾಪು, ಬಾರ್ಯ ಸಿಎ ಬ್ಯಾಂಕ್ ಅಧ್ಯಕ್ಷ ಸುಬ್ರಹ್ಮಣ್ಯ ಗೌಡ, ಆದಂ ಕಲ್ಲೇರಿ, ಬಿಜೆಪಿ ಗ್ರಾಮ ಸಮಿತಿ ಕಾರ್ಯದರ್ಶಿ ಜಯರಾಮ ಆಚಾರ್ಯ ಪ್ರಮುಖರಾದ ಸಂಕಪ್ಪ ಪೂಜಾರಿ, ಜನಾರ್ದನ ಗೌಡ, ವಾಸುದೇವ ಕಲ್ಲೇರಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News