ಬೆಳ್ಮ ಗ್ರಾಮಸ್ಥರಿಂದ ನೆರೆ ಸಂತ್ರಸ್ಥರಿಗೆ ನೆರವು

Update: 2019-08-19 17:39 GMT

ಉಳ್ಳಾಲ: ಇತ್ತೀಚೆಗೆ ಎಡೆಬಿಡದೆ ಸುರಿದ ಮಳೆಯಿಂದ ತೊಂದರೆಗೊಳಗಾದ ಕುಟುಂಬಕ್ಕೆ ಪರಿಹಾರ ಒದಗಿಸಿಕೊಡುವ ದೃಷ್ಟಿಯಿಂದ ದೇರಳಕಟ್ಟೆಯಲ್ಲಿ ಬೆಳ್ಮ ಗ್ರಾಮ ನಾಗರಿಕರ ವತಿಯಿಂದ ನೆರೆ ಪರಿಹಾರ ನಿಧಿ ಮತ್ತು ಅಗತ್ಯ ವಸ್ತುಗಳ ಸಂಗ್ರಹ ದೇರಳಕಟ್ಟೆಯಲ್ಲಿ ನಡೆಯಿತು. ಬೆಳ್ಮ ಗ್ರಾಮ ನಾಗರಿಕರು ದೇರಳಕಟ್ಟೆಯಲ್ಲಿರುವ ವಿವಿಧ ಅಂಗಡಿಗಳಿಂದ ಅಗತ್ಯ ವಸ್ತುಗಳ ಸಂಗ್ರಹ ಮಾಡಿದರು.

ಈ ಬಗ್ಗೆ ಮಾತನಾಡಿದ ಶಾಸಕ ಯು.ಟಿ. ಖಾದರ್, ವಿಪರೀತ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲಿ ಬೆಳ್ಮ ಗ್ರಾಮ ನಾಗರಿಕರು ನೆರೆ ಪರಿಹಾರ ಯೋಜನೆ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದರು.

ಬೆಳ್ಮ ಗ್ರಾ.ಪಂ. ಉಪಾಧ್ಯಕ್ಷ ಸತ್ತಾರ್, ಸದಸ್ಯರಾದ ಕಬೀರ್ ದೇರಳಕಟ್ಟೆ, ರಝಾಕ್,ರ ಉಳ್ಳಾಲ  ಯೂತ್ ಕಾಂಗ್ರೆಸ್  ಅಧ್ಯಕ್ಷ ರವೂಫ್ ಸಿ.ಎಂ., ಸಯ್ಯದ್ ಅಲಿ, ಫಾರೂಕ್, ಶರೀರ್ಫ ಕಾನಕೆರೆ, ರವಿರಾಜ್ ಶೆಟ್ಟಿ, ಉಸ್ಮಾನ್ ಕಾನಕೆರೆ, ರವೂಫ್ ರೆಂಜಾಡಿ, ನವೀನ್ ಕುಮಾರ್, ಅಬ್ದುಲ್ ಖಾದರ್ ದೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News