ಬಂಟ್ವಾಳ: ಟೆಂಪೋ ಚಾಲಕರ, ಮಾಲಕರ ಸಂಘದ ಸಭೆ

Update: 2019-08-19 17:53 GMT

ಬಂಟ್ವಾಳ, ಆ. 19: ಸಣ್ಣ ಮತ್ತು ದೊಡ್ಡ ಸರಕು ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡ್‍ನ ರಕ್ತೇ ಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ, ವಕೀಲ ರಮಾನಾಥ ಕಾರಂದೂರು ಅವರ ಅಧ್ಯಕ್ಷತೆಯಲ್ಲಿ ಜರಗಿತು. 

ಕಾರ್ಯದರ್ಶಿ ಹರೀಶ್ ಅವರು ಲೆಕ್ಕ ಪತ್ರವನ್ನು ಸಭೆಯ ಮುಂದಿಟ್ಟು ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. 2019-20ನೇ ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆರಿಸಲಾಯಿತು. ಅಧ್ಯಕ್ಷರಾಗಿ ವಕೀಲ ರಮಾನಾಥ ಕಾರಂದೂರು, ಉಪಾಧ್ಯಕ್ಷರಾಗಿ ನಾರಾಯಣ ಪೂಜಾರಿ, ಕಾರ್ಯದರ್ಶಿ ಹರೀಶ್, ಜೊತೆ ಕಾರ್ಯದರ್ಶಿ ಸುರೇಶ್ ಗೌಡ, ಕೋಶಾಧಿಕಾರಿ ಲತೀಫ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಜೇಶ್, ವಸಂತ, ನಝೀರ್, ಅಬ್ಬಾಸ್, ನಾರಾಯಣದಾಸ್, ಶೀನ, ಜಗ್ಗ, ಇಮ್ತಿಯಾಝ್ ವರದರಾಜ್, ಪದ್ಮನಾಭ, ಹರೀಶ್ ನಾಯಕ್, ನಾಗೇಶ್, ರವೀಂದ್ರ, ಅಶೋಕ, ಲೂಯಿಸ್ ಮೊಂತೆರೋ, ಹರೀಶ್, ರೋಬರ್ಟ್ ಡಿಸೋಜ, ಎನ್.ಕೆ.ಅಹ್ಮದ್ ಬಾವಾ, ಜಗದೀಶ್, ರಾಜೇಶ್, ಉಮೇಶ್ ಮತ್ತು ಹಕೀಂ ಅವರು ಆಯ್ಕೆಯಾದರು. ಮುಖ್ಯ ಅಥಿತಿಗಳಾಗಿ ಲೋಕೇಶ್ ಸುವರ್ಣ ಉಪಸ್ಥಿತರಿದ್ದರು. 

ಇತ್ತೀಚೆಗೆ ಮಳೆಯಿಂದ ಹಾನಿಯಾಗಿರುವ ಬೆಳ್ತಂಗಡಿ ತಾಲೂಕಿನ ಒಂದು ಗ್ರಾಮಕ್ಕೆ 5 ಕ್ವಿಂಟಾಲ್ ಅಕ್ಕಿಯನ್ನು ನೀಡುವುದೆಂದು ನಿರ್ಧರಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News