ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಆಳ್ವಾಸ್ ಸಾಧನೆ: ಆಳ್ವಾಸ್‍ನ ರಾಘುವೇಂದ್ರ ಪ್ರಸಾದ್‍ಗೆ 34ನೇ ರ್ಯಾಂಕ್

Update: 2019-08-19 18:32 GMT

ಮೂಡುಬಿದಿರೆ: ಮೇ 2019 ರಲ್ಲಿ ನಡೆದ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ರಾಘವೇಂದ್ರ ಪ್ರಸಾದ್ ಕೆ. ಜಿ. ದೇಶದಲ್ಲಿಯೇ 34 ನೇ ರ್ಯಾಂಕ್ ಗಳಿಸಿದ್ದಾರೆ. ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ. ರಾಘವೇಂದ್ರ ಸಹಿತ ಒಟ್ಟು 9 ಮಂದಿ ವಿದ್ಯಾರ್ಥಿಗಳು ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ. 

ಆಳ್ವಾಸ್ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ವಾಣಿಶ್ರೀ, ನಿಖಿತಾ ಗೌಡ, ಮಹಮ್ಮದ್ ನೌಫಲ್, ಸಾಹುಲ್ ಹಮೀದ್, ಕೀರ್ತನಾ ಎಮ್. ಕೆ., ಅಮಲ್ ಮ್ಯಾಥಿವ್, ವರುಣ್ ಗೌಡ, ವರುಣ್ ಕೆ. ಎಸ್. ಉತ್ತೀರ್ಣರಾಗಿದ್ದಾರೆ. 

ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್ ಹಾಗೂ ಸಿ.ಎ.- ಫೌಂಡೇಶನ್ ಸಂಯೋಜಕರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News