ಸೆ.4-5ರಂದು ಟಿಪ್ಪು ಸುಲ್ತಾನ್ ಕುರಿತ ಅಪರೂಪದ ಪುಸ್ತಕಗಳ ಆನ್‌ಲೈನ್ ಹರಾಜು

Update: 2019-08-20 14:14 GMT

ಹೊಸದಿಲ್ಲಿ,ಆ.20: ಮುಂಬೈನ ಹರಾಜು ಸಂಸ್ಥೆ ಪ್ರಿನ್ಸೆಪ್ಸ್ ಸೆ.4-5ರಂದು ಅಪರೂಪದ ಸಂಗ್ರಹಗಳ ಆನ್‌ಲೈನ್ ಹರಾಜನ್ನು ನಡೆಸಲಿದ್ದು, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜೀವನದ ಕೊನೆಯ ವರ್ಷಗಳಲ್ಲಿಯ ಪುಸ್ತಕಗಳು, ನಕಾಶೆಗಳು ಮತ್ತು ಹಸ್ತಪ್ರತಿಗಳು ಇವುಗಳಲ್ಲಿ ಸೇರಿವೆ.

‘ಎ ನರೇಟಿವ್ ಆಫ್ ದಿ ಕ್ಯಾಂಪೇನ್ ಇನ್ ಇಂಡಿಯಾ,ವಿಚ್ ಟರ್ಮಿನೇಟೆಡ್ ದಿ ವಾರ್ ವಿತ್ ಟಿಪ್ಪು ಸುಲ್ತಾನ್,ಇನ್ 1792’ ಎಂಬ ಶೀರ್ಷಿಕೆಯ ಪುಸ್ತಕ ಹಾಗೂ ಸುಲ್ತಾನರು ಆಳುತ್ತಿದ್ದ ಪ್ರದೇಶಗಳನ್ನು ತೋರಿಸುವ 1792 ಮತ್ತು 1799ರ ಎರಡು ನಕಾಶೆಗಳು ಟಿಪ್ಪು ಕುರಿತ ಸಂಗ್ರಹದಲ್ಲಿವೆ. ಪುಸ್ತಕವು 3,90,000 ರೂ.ಗೆ ಮತ್ತು ನಕಾಶೆಗಳು ತಲಾ 90,000-1,20,000 ರೂ.ಗೆ ಮಾರಾಟವಾಗುವ ನಿರೀಕ್ಷೆಯಿದೆ.

ಹರಾಜಿಗೆ ಸುಮಾರು 400 ವರ್ಷ ಅವಧಿಯಲ್ಲಿನ ಪುಸ್ತಕಗಳನ್ನು ಇಡಲಾಗುತ್ತಿದ್ದು,1605ರಲ್ಲಿ ಪ್ರಕಟಗೊಂಡಿದ್ದ ‘ ಡೆ ವೀಟಾ ಸೀಜರುಮ್( 12 ಸೀಜರ್‌ಗಳು)’ ಅತ್ಯಂತ ಹಳೆಯ ಪುಸ್ತಕವಾಗಿದೆ. ಈ ಪುಸ್ತಕಕ್ಕೆ 40,000-50,000 ರೂ.ಬೆಲೆಯನ್ನು ನಿರೀಕ್ಷಿಸಲಾಗಿದೆ.

 ಹರಾಜಿಗಿಡಲಾಗಿರುವ ಇನ್ನೊಂದು ಪುಸ್ತಕ,ಲೇಡಿ ಅನ್ನಾ ಮೇರಿ ಶಿಪ್ಲೆ ಜೋನ್ಸ್ ವಿರಚಿತ ‘ದಿ ವರ್ಕ್ಸ್ ಆಫ್ ವಿಲಿಯಂ ಜೋನ್ಸ್ ’ 7,25,000-9,50,000 ರೂ.ಗಳಿಗೆ ಮಾರಾಟವಾಗಲಿದೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಫ್ರೆಂಚ್ ವಿಜಯಗಳ ಕುರಿತು ರಿಚರ್ಡ್ ಒವೆನ್ ಕ್ಯಾಂಬ್ರಿಡ್ಜ್ ಬರೆದಿರುವ ‘ ನೆರೇಟಿವ್ ಆಫ್ ದಿ ವಾರ್ ಆನ್ ದಿ ಕೋಸ್ಟ್ ಆಫ್ ಕೋರಮಂಡಲ ’ ಪುಸ್ತಕವು 3,45,000 ರೂ.ಗಳಿಂದ 4,50,000 ರೂ.ವರೆಗಿನ ಬೆಲೆಗೆ ಹರಾಜಾಗುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News