×
Ad

ಒಲಿಂಪಿಕ್ಸ್ ಟೆಸ್ಟ್ ಇವೆಂಟ್ ಫೈನಲ್: ನ್ಯೂಝಿಲ್ಯಾಂಡ್‌ಗೆ ಸೋಲುಣಿಸಿದ ಭಾರತ

Update: 2019-08-21 14:06 IST

ಟೋಕಿಯೊ, ಆ.21: ಭಾರತೀಯ ಪುರುಷರ ಹಾಕಿ ತಂಡ ಬುಧವಾರ ನಡೆದ ಒಲಿಂಪಿಕ್ಸ್ ಟೆಸ್ಟ್ ಇವೆಂಟ್‌ನ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 5-0 ಗೋಲುಗಳ ಅಂತರದಿಂದ ಮಣಿಸುವುದರೊಂದಿಗೆ ರೌಂಡ್ ರಾಬಿನ್ ಲೀಗ್ ಹಂತದ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡಿದೆ.

ನಾಯಕ ಹರ್ಮನ್‌ಪ್ರೀತ್ ಸಿಂಗ್ 7ನೇ ನಿಮಿಷದಲ್ಲಿ ಗೋಲು ಖಾತೆ ತೆರೆದರು. ಶಂಶೆರ್ ಸಿಂಗ್(18ನೇ), ನೀಲಕಂಠ ಶರ್ಮಾ(22ನೇ ನಿ.), ಗುರುಸಾಹಿಬ್‌ಜೀತ್ ಸಿಂಗ್(26ನೇ ನಿ.) ಹಾಗೂ ಮನ್‌ದೀಪ್ ಸಿಂಗ್(27ನೇ ನಿ.)ತಲಾ ಒಂದು ಗೋಲು ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು.

ಭಾರತ ಟೂರ್ನಿಯ ಲೀಗ್ ಹಂತದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 1-2 ಅಂತರದಿಂದ ಸೋತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News