×
Ad

​ಆ.25ರಂದು ಸಿಐಟಿಯು ಸಮ್ಮೇಳನ

Update: 2019-08-21 20:21 IST

ಕುಂದಾಪುರ, ಆ.21: ತುಮಕೂರು ನಗರದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಸಿಐಟಿಯು ಕರ್ನಾಟಕ ರಾಜ್ಯ ಸಮ್ಮೇಳನಕ್ಕೆ ಪೂರ್ವಭಾವಿ ಯಾಗಿ ಉಡುಪಿ ಜಿಲ್ಲಾ ಸಮ್ಮೇಳನ ಸೆ.8 ಮತ್ತು 9ರಂದು ಕುಂದಾಪುರ ನಗರದಲ್ಲಿ ನಡೆಯಲಿದೆ.

 ಅದೇ ರೀತಿ ಸಿಐಟಿಯು ಕುಂದಾಪುರ ತಾಲೂಕು ಸಮ್ಮೇಳನವು ಆ.25 ರಂದು ಕುಂದಾಪುರ ನಗರದ ಕಾರ್ಮಿಕ ಭವನದ ಮಾರ್ಗೊಳಿ ಜನಾರ್ದನ ಆಚಾರ್ ವೇದಿಕೆಯಲ್ಲಿ ಜರಗಲಿದ್ದು, ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ. ಶಂಕರ್ ಸಮ್ಮೇಳನವನ್ನು ಉದ್ಘಾಟಿಸಲಿರುವರು ಎಂದು ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News