ಎಂಡೋಸಲ್ಫಾನ್ ಬಾಧಿತರ ಬಸ್ ಪಾಸುಗಳ ನವೀಕರಣ

Update: 2019-08-21 14:59 GMT

ಉಡುಪಿ, ಆ.21:ಕ.ರಾ.ರ.ಸಾ.ಸಂಸ್ಥೆಯು ಎಂಡೋಸಲ್ಫಾನ್ ಬಾಧಿತ ವ್ಯಕ್ತಿಗಳು ಪ್ರಯಾಣಿಸಲು ಉಚಿತ ಬಸ್ ಪಾಸುಗಳನ್ನು ವಿತರಿಸುತ್ತಿದೆ. 2019ನೇ ಸಾಲಿನಲ್ಲಿ ಬಸ್ ಪಾಸುಗಳ ಅವಧಿ ಮುಕ್ತಾಯಗೊಳ್ಳಲಿರುವ ಉಡುಪಿ ಜಿಲ್ಲೆ ಯ ಪಾಸುದಾರರಿಗೆ ಅನುಕೂಲವಾಗುವಂತೆ ಬಸ್‌ಪಾಸುಗಳನ್ನು ನವೀಕರಿಸಲು ಹತ್ತಿರದ ಕ.ರಾ.ರ.ಸಾ.ನಿಗಮ ಉಡುಪಿ ಘಟಕ ಅಥವಾ ಕುಂದಾಪುರ ಘಟಕ ದಲ್ಲಿ ಅರ್ಜಿಯನ್ನು ಪಡೆದು ಭರ್ತಿಗೊಳಿಸಿ, ಅಗತ್ಯ ದಾಖಲೆಗಳನ್ನು ನೀಡಬೇಕಾಗಿದೆ.

ದಾಖಲೆಗಳು:  ಹಳೆಯ ಪಾಸ್‌ಕಾರ್ಡನ್ನು ಕಡ್ಡಾಯವಾಗಿ ಹಿಂದಿರುಗಿಸ ಬೇಕು. ಒಂದು ಸ್ಟ್ಯಾಂಪ್‌ಸೈಜ್‌ನ ಹಾಗೂ ಎರಡು ಪಾಸ್‌ಪೋರ್ಟ್ ಸೈಜಿನ ಪೋಟೋಗಳು, ಗುರುತಿನ ಚೀಟಿನ ಮಾನ್ಯತಾ ಅವಧಿಯನ್ನು ಪರಿಶೀಲನೆ ಮಾಡುವ ಸಲುವಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿತರಿಸುವ ಗುರುತಿನ ಚೀಟಿಯ ಮೂಲ ಪ್ರತಿಯನ್ನು ಹಾಗೂ ಜೆರಾಕ್ಸ್ ಪ್ರತಿಯನ್ನು ತರಬೇಕು. ವಿಳಾಸದ ದೃಢೀಕರಣ ದಾಖಲಾತಿ (ಆಧಾರ್‌ಕಾರ್ಡ್), ಜಿಲ್ಲಾಧಿಕಾರಿ ನೀಡಿದ ಗುರುತಿನ ಕಾರ್ಡಿನ ಪ್ರತಿ, ವೈದ್ಯಕೀಯ ಪ್ರಮಾಣ ಪತ್ರ, ತಹಶೀಲ್ದಾರರು ನೀಡಿದ ಪತ್ರದ ಪ್ರತಿಯನ್ನು ಲಗತ್ತಿಸಬೇಕು.

ಅರ್ಜಿ ಸಲ್ಲಿಸಿದ ದಿನದಿಂದ ಹತ್ತು ದಿನದೊಳಗೆ ಪಾಸು ನೀಡಲಾಗುವುದು ಎಂದು ಮಂಗಳೂರು ಕ.ರಾ.ರ.ಸಾ.ಸಂಸ್ಥೆಯ ವಿಬಾಗೀಯ ನಿಯಂತ್ರಣಾ ಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News