ವೆಲೆನ್ಸಿಯಾ ಚರ್ಚ್‌ನಲ್ಲಿ ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ

Update: 2019-08-21 16:27 GMT

ಮಂಗಳೂರು, ಆ.21: ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ನಗರದ ವೆಲೆನ್ಸಿಯದ ಸಂತ ವಿನ್ಸೆಂಟ್ ಫಿರರ್ ಚರ್ಚ್‌ನ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ‘ವೆಲೆನ್ಸಿಯಾ ಹಿರಿಯ ನಾಗರಿಕರ ಕ್ಲಬ್’ನ್ನು ಲೋಕಾರ್ಪಣೆಗೊಳಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಂತ ಆ್ಯಂಟೋನ ಆಶ್ರಮದ ನಿರ್ದೇಶಕ ಒನಿಲ್ ಡಿಸೋಜ ಮಾತನಾಡಿ, ನೂತನ ಕ್ಲಬ್‌ನಿಂದ ಹಿರಿಯರ ನಾಗರಿಕರಿಗೆ ಸಹಾಯವಾಗಲಿದೆ. ಮಾನಸಿಕವಾಗಿ ಧೈರ್ಯ ತುಂಬುವುದಲ್ಲದೆ, ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತದ ಸಿನಿಯರ್ ಸಿಟಿಜನ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎಡ್ಮಂಡ್ ಫ್ರಾಂಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂತ ವಿನ್ಸೆಂಟ್ ಫಿರರ್ ಚರ್ಚ್‌ನ ಪ್ರಧಾನ ಧರ್ಮಗುರು ಫಾ.ಜೇಮ್ಸ್ ಡಿಸೋಜ, ಸಹಾಯಕ ಧರ್ಮಗುರು ಫಾ.ಜಾಸ್ವಿನ್ ಪ್ರವೀಣ್, ಚರ್ಚ್‌ನ ಉಪಾಧ್ಯಕ್ಷ ಹಾಗೂ ಎಂಸಿಸಿ ಬ್ಯಾಂಕ್‌ನ ಚೇರ್‌ಮನ್ ಅನಿಲ್ ಲೋಬೊ, ಕಾರ್ಯದರ್ಶಿ ಲಿಜಿ ಪಿಂಟೋ, ಎಸ್‌ವಿಪಿ ಅಧ್ಯಕ್ಷ ವಾಲ್ವಿನ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಸುಮಾರು 250ಕ್ಕೂ ಹೆಚ್ಚು ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News