ಗಾಂಜಾ ಮಾರಾಟ: ಬಾಲಕ ಸಹಿತ ಇಬ್ಬರ ಬಂಧನ

Update: 2019-08-21 16:07 GMT

ಕಾಪು, ಆ.21: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಾಲಕ ಸಹಿತ ಇಬ್ಬರನ್ನು ಕಾಪು ಪೊಲೀಸರು ಆ.20ರಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮೂಳೂರು ಎಂಬಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಮಲ್ಲಾರ್ ಕೋಟೆ ರಸ್ತೆಯ ಮುಹಮ್ಮದ್ ಖಾಸೀಮ್ ಯಾನೆ ಉಬೇದ್ (58) ಹಾಗೂ ಉಚ್ಚಿಲದ 16ವರ್ಷದ ಬಾಲಕ ಎಂದು ಗುರುತಿಸಲಾಗಿದೆ.ಇವರಿಂದ ಒಟ್ಟು ಒಂದು ಕೆ.ಜಿ. 508 ಗ್ರಾಂ ಗಾಂಜಾ, ವೇಯಿಂಗ್ ಮೇಷಿನ್, ಎರಡು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.

ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ರಿಮ್ಯಾಂಡ್ ಹೋಮ್‌ಗೆ ಹಾಗೂ ಇನ್ನೋರ್ವ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News