ಬ್ಲಾಕ್‌ಮೆಲ್ ಆರೋಪಿ ಫ್ಲಾಟ್‌ನಲ್ಲಿ ಗಾಂಜಾ ಪತ್ತೆ

Update: 2019-08-21 16:08 GMT

ಮಣಿಪಾಲ, ಆ.18: ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಲಾಕ್‌ಮೆಲ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟ ಮಣಿಪಾಲದ ಅನಂತ ನಗರದ ಹುಡ್ಕೋ ಕಾಲೋನಿಯ ಸ್ವರೂಪ್ ಶೆಟ್ಟಿ(23) ಎಂಬಾತನ ಫ್ಲಾಟ್‌ನಲ್ಲಿ ಗಾಂಜಾ ಪತ್ತೆಯಾಗಿದೆ.

ತನಿಖೆಯ ಹಿನ್ನೆಲೆಯಲ್ಲಿ ಪೊಲೀಸರು ಸ್ವರೂಪ್ ಶೆಟ್ಟಿಯನ್ನು ಕಸ್ಟಡಿಗೆ ತೆಗೆದು ಕೊಂಡಿದ್ದು, ಆ.20ರಂದು ಬೆಳಗ್ಗೆ ಆತ ವಾಸ್ತವ್ಯವಿದ್ದ ಮಣಿಪಾಲದ ಮಾಂಡವಿ ಎಮರಾಲ್ಡ್‌ಗೆ ಕರೆದುಕೊಂಡು ಶೋಧನೆ ನಡೆಸಿದಾಗ ಬೆಡ್‌ರೂಂನ ಕಪಾಟಿ ನಲ್ಲಿ 90 ಗ್ರಾಂ ಗಾಂಜಾ ಪತ್ತೆಯಾಗಿದೆ. ಇದರ ಮೌಲ್ಯ 2,000ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News