ಆಮ್ಚ ಸಂದೇಶ್ ಪ್ರತಿನಿಧಿಗಳ ಸಹಮಿಲನ

Update: 2019-08-21 16:19 GMT

ಮಂಗಳೂರು, ಆ.21:ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಕೇಂದ್ರೀಯ ಸಮಿತಿಯ ವತಿಯಿಂದ ‘ಆಮ್ಚ ಸಂದೇಶ್ ಪತ್ರ’ದ ಸಂದೇಶ ಪ್ರತಿನಿಧಿ ಮತ್ತು ಮಾಧ್ಯಮ ಪ್ರತಿನಿಧಿಗಳ ಸಹಮಿಲನವು ನಗರದ ಮಿಲಾಗ್ರಿಸ್ ಪಿ.ಯು. ಕಾಲೇಜಿನ ಸಭಾಂಗಣದಲ್ಲಿ ರವಿವಾರ ಜರುಗಿತು.

ಕೆಥೊಲಿಕ್ ಸಭಾ ಮಂಗ್ಳುರ್ ಪ್ರದೇಶದ ಅಧ್ಯಕ್ಷ ರೊಲ್ಫಿ ಡಿಕೋಸ್ತ ಅಧ್ಯಕ್ಷತೆ ವಹಿಸಿದ್ದರು. ಮಿಲಾಗ್ರಿಸ್ ಘಟಕದ ಆಧ್ಯಾತ್ಮಿಕ ನಿರ್ದೇಶಕ ಅ.ವಂ.ಜೋಸೆಫ್ ಹೆರಾಲ್ಡ್ ಲೋಬೊ ಆಶೀರ್ವಚಿಸಿದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಕಾರ್ಯಕ್ರಮ ಉದ್ಘಾಟಿಸಿ ಸಂದೇಶ ನೀಡಿದರು. ವೇದಿಕೆಯಲ್ಲಿ ಆಮ್ಚಾ ಸಂದೇಶ್ ಪತ್ರದ ಸಂಚಾಲಕ ಎಲ್ರೊಯ್ ಕಿರಣ್ ಕ್ರಾಸ್ಟೊ, ಆಮ್ಚೊ ಸಂದೇಶ್‌ಪತ್ರದ ಸಂಪಾದಕ ವಿಲ್ಫ್ರೆಡ್ ಲೋಬೊ, ಉಡುಪಿಯ ಮಾಧ್ಯಮ ಸಂಚಾಲಕ ಮೈಕಲ್ ರೊಡ್ರಿಗಸ್, ಮಿಲಾಗ್ರಿಸ್ ಕೆಥೊಲಿಕ್ ಸಭಾ ಘಟಕದ ಅಧ್ಯಕ್ಷೆ ಹೊನೋರಾ ಪಿರೇರಾ, ಕೇಂದ್ರೀಯ ಕೆಥೊಲಿಕ್ ಸಭಾದ ಕೋಶಾಧಿಕಾರಿ ಜೋಕಿಮ್ ಡಿಸೋಜ ಉಪಸ್ಥಿತರಿದ್ದರು.

ಆಮ್ಚ ಸಂದೇಶ್ ಪತ್ರದ ಸಹಯೋಗದಲ್ಲಿ ಲೇಖಕರ ಸಂಘವು ನಡೆಸಿಕೊಟ್ಟ ಕೊಂಕಣಿ ಕಥೆಗಳ ಸ್ಪರ್ಧಾ ಫಲಿತಾಂಶವನ್ನು ಲೇಖಕ ಸಿಜ್ಯೆಸ್ ತಾಕೊಡೆ ವಾಚಿಸಿದರು. ಕೆಥೊಲಿಕ್ ಸಭಾದ ಸಂಚಾಲಕ ರಿಚರ್ಡ್ ಮೊರಾಸ್ ಬಹುಮಾನ ವಿತರಿಸಿದರು.

ಮಾಧ್ಯಮಗಳಿಗೆ ಮಾಹಿತಿ ನೀಡುವ ಬಗೆ ಹೇಗೆ? ಎಂಬುದರ ಕುರಿತು ಮೈಕಲ್ ರೊಡ್ರಿಗಸ್ ಮತ್ತು ಪಿಂಗಾರ ಪತ್ರಿಕೆಯ ಸಂಪಾದಕ ರೈಮಂಡ್ ಡಿಕುನ್ಹಾ ಮಾಹಿತಿ ನೀಡಿದರು. ಕೇಂದ್ರೀಯ ಕಾರ್ಯದರ್ಶಿ ನವೀನ್ ಬ್ರ್ಯಾಗ್ಸ್ ವಂದಿಸಿದರು. ಆ್ಯಂಟನಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News