ಶ್ರೀಕೃಷ್ಣ ಜನ್ಮಾಷ್ಟಮಿಗೆ ರಮಾಂಜಿಯಿಂದ ‘ಸ್ನೇಕ್‌ಕ್ವೀನ್’ ವೇಷ

Update: 2019-08-21 16:32 GMT

ಉಡುಪಿ, ಆ.21: ಕಳೆದ ಆರು ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿಗೆ ವಿಶಿಷ್ಟ ರೀತಿಯ ವೇಷಧರಿಸುತ್ತಿದ್ದ ಕಲಾವಿದ ರಮಾಂಜಿ ಈ ಬಾರಿ ಸ್ನೇಕ್ ಕ್ವೀನ್ ಎಂಬ ಕಾಲ್ಪನಿಕ ಪಾತ್ರದ ವೇಷವನ್ನು ಧರಿಸಲಿದ್ದಾರೆ.

ಪ್ರಶಾಂತ್ ಉದ್ಯಾವರ ಕಲ್ಪನೆಯಲ್ಲಿ ಈ ಬಾರಿ ಸ್ನೇಕ್ ಕ್ವೀನ್ ವೇಷ ಧರಿಸ ಲಿದ್ದು, ಈ ಮೂಲಕ ಸಾರ್ವಜನಿಕರಿಂದ ಸಾಕಷ್ಟು ಹಣ ಸಂಗ್ರಹಿಸುವ ಗುರಿ ಹೊಂದಿದ್ದೇನೆ. ಈ ಹಣವನ್ನು ಕುಂದಾಪುರ ತಾಲೂಕಿನ ಕೋದಂಡರಾಮ ಶೆಟ್ಟಿಗಾರ್ ಎಂಬವರ ಮೂರನೆ ತರಗತಿಯ ಮಗಳು ಸೋನಿಯಾಳ ಮೆದುಳು ಗಡ್ಡೆ ಶಸ್ತ್ರಚಿಕಿತ್ಸೆಗೆ ನೀಡಲಾಗುವುದು ಎಂದು ರಾಮಾಂಜಿ ಸುದ್ದಿಗೋಷ್ಠಿಯಲ್ಲಿ ಇಂದು ತಿಳಿಸಿದರು.

ಧನಸಹಾಯ ನೀಡಲು ಇಚ್ಛಿಸುವವರು ಸಿಂಡಿಕೇಟ್ ಬ್ಯಾಂಕ್ ಕುಂಜಿಬೆಟ್ಟು ಶಾಖೆ, ಎಸ್‌ಬಿ ಖಾತೆ ನಂಬರ್- 08162210042226 (ಐಎಫ್‌ಎಸ್‌ಸಿ ಕೋಡ್- ಎಸ್‌ವೈಎನ್‌ಬಿ0000186) ಜಮೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 8105134893ನ್ನು ಸಂಪರ್ಕಿಸಬಹುದು. ಸುದ್ದಿಗೋಷ್ಠಿಯಲ್ಲಿ ಉಡುಪಿ ಕರಾವಳಿ ಯೂತ್ ಕ್ಲಬ್‌ನ ಸಹನಾ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News