ದರೋಡೆಗೆ ಸಂಚು ರೂಪಿಸಿದ ಪ್ರಕರಣ: ಆ.24ಕ್ಕೆ ಸಿಬಿಐ ತಂಡ ಮಂಗಳೂರಿಗೆ

Update: 2019-08-21 16:38 GMT

ಮಂಗಳೂರು, ಆ.21: ಕೇಂದ್ರ ತನಿಖಾ ತಂಡದ ಸೋಗಿನಲ್ಲಿ ದರೋಡೆಗೆ ಸಂಚು ರೂಪಿಸಿದ ರೂವಾರಿ ಕೇರಳ ಮೂಲದ ಸ್ಯಾಮ್ ಪೀಟರ್ (53)ನನ್ನು ತನ್ನ ವಶಕ್ಕೆ ಪಡೆಯಲು ಸಿಬಿಐ ತಂಡ ಆ.24ರಂದು ಮಂಗಳೂರಿಗೆ ಆಗಮಿಸಲಿದೆ.

ಇದೇ ವೇಳೆ ಸ್ಯಾಮ್ ಪೀಟರ್ ಸೇರಿದಂತೆ ಎಂಟು ಮಂದಿ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಗುರುವಾರ ಮುಕ್ತಾಯಗೊಳ್ಳಲಿದ್ದು, ಮತ್ತೆ ಪೊಲೀಸ್ ಕಸ್ಟಡಿ ಕೋರಲಿದ್ದಾರೆ.

ಕೇಂದ್ರ ತನಿಖಾ ತಂಡದ ಸೋಗಿನಲ್ಲಿ ದರೋಡೆಗೆ ಸಂಚು ರೂಪಿಸಿದ ರೂವಾರಿ ಕೇರಳ ಮೂಲದ ಸ್ಯಾಮ್ ಪೀಟರ್(53)ನನ್ನು ತನ್ನ ವಶಕ್ಕೆ ಪಡೆಯಲು ಸಿಬಿಐ ತಂಡ ಆ.24ರಂದು ಮಂಗಳೂರಿಗೆ ಆಗಮಿಸಲಿದೆ. ಇದೇ ವೇಳೆ ಸ್ಯಾಮ್ ಪೀಟರ್ ಸೇರಿದಂತೆ ಎಂಟು ಮಂದಿ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಗುರುವಾರ ಮುಕ್ತಾಯಗೊಳ್ಳಲಿದ್ದು, ಮತ್ತೆ ಪೊಲೀಸ್ ಕಸ್ಟಡಿ ಕೋರಲಿದ್ದಾರೆ.

ದೇಶದ ನಾನಾ ಕಡೆ ಸ್ಯಾಮ್ ಪೀಟರ್ ಮೇಲೆ ಪ್ರಕರಣ ದಾಖಲಾಗಿದ್ದು, ಈತನನ್ನು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂದು ಘೋಷಿಸಿ ಈತನ ಬಂಧನಕ್ಕೆ ಸಿಸಿಬಿ ರೆಡ್‌ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಈತ ವಿದೇಶಕ್ಕೆ ಪರಾರಿಯಾಗಿರಬಹುದು ಎಂಬ ಸಂಶಯ ವ್ಯಕ್ತವಾಗಿ ಹಲವು ಸಮಯದಿಂದ ಶೋಧ ಕಾರ್ಯವೂ ನಡೆದಿತ್ತು. ಆದರೆ ಆ.16ರಂದು ಪಂಪ್‌ವೆಲ್ ಬಳಿ ದರೋಡೆ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದಾಗ ನಗರ ಪೊಲೀಸರು ಲಾಡ್ಜ್‌ನಲ್ಲಿ ಈತ ಹಾಗೂ ಸಹಚರರನ್ನು ಬಂಧಿಸಿದ್ದರು. ಈ ಮೂಲಕ ಅಂತಾರಾಜ್ಯ ಮಟ್ಟದ ಲೂಟಿ ಗ್ಯಾಂಗೊಂದನ್ನು ನಗರ ಪೊಲೀಸರು ಪತ್ತೆಹಚ್ಚಿ ಮಹತ್ವದ ಸಾಧನೆ ಮಾಡಿದ್ದರು.

ಪೀಟರ್ ಬಂಧನ ವಿಷಯ ತಿಳಿದ ಸಿಬಿಬಿ ತಂಡ ಗುರುವಾರ ನಗರಕ್ಕೆ ಆಗಮಿಸಬೇಕಿತ್ತು, ಆದರೆ ಕೆಲ ದಿನ ವಿಳಂಬವಾಗಿ ಆಗಮಿಸಲಿದೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲೂ ಈತ ನಿರಂತರ ಲೂಟಿ ಚಟುವಟಿಕೆಯಲ್ಲಿ ತೊಡಗಿಸಿ, ತಲೆಮರೆಸಿಕೊಂಡ ಕಾರಣ ಮಹಾರಾಷ್ಟ್ರ ಸರಕಾರ ಈತನನ್ನು ‘ರಾಜ್ಯದ ಘೋಷಿತ ಅಪರಾಧಿ’ ಎಂದು ಘೋಷಿಸಿದೆ.

ಮತ್ತೆ ಕಸ್ಟಡಿ ಕೋರಿಕೆ: ಈ ಪ್ರಕರಣದಲ್ಲಿ ಬಂಧಿತ ಸ್ಯಾಮ್ ಪೀಟರ್ ಸಹಿತ ಎಂಟು ಮಂದಿ ದರೋಡೆ ಆರೋಪಿಗಳು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಸುವ ಸಲುವಾಗಿ ಗುರುವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಪೊಲೀಸ್ ಕಸ್ಟಡಿ ಕೋರಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಪೂರ್ವ (ಕದ್ರಿ) ಠಾಣೆ ಪೊಲೀಸರು ಉಡುಪಿಯ ವಸತಿಗೃಹದ ಮಾಲಕನನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಾಲಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವುದಾಗಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News