ಪುದು, ನಶಾತುದ್ದೀನ್ ಯೂತ್ ಫೆಡರೇಶನ್ ವತಿಯಿಂದ ಸಂತ್ರಸ್ತರಿಗೆ ಸಹಾಯ

Update: 2019-08-21 16:48 GMT

ಫರಂಗಿಪೇಟೆ : ನಶಾತುದ್ದೀನ್ ಯೂತ್ ಫೆಡರೇಶನ್ ಹತ್ತನೇಮೈಲ್ ಕಲ್ಲು, ಪುದು ವತಿಯಿಂದ ಜಲಪ್ರವಾಹ ಮತ್ತು ಪ್ರಕ್ರತಿ ವಿಕೋಪದಿಂದ ತತ್ತರಿಸಿದ ಕೊಡಗಿನ ಸಂತ್ರಸ್ತರಿಗೆ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ರೇಶನ್ ಮತ್ತು ಅಗತ್ಯ ಸಾಮಾಗ್ರಿಗಳ ಕಿಟ್ ಗಳನ್ನು ನಶಾತ್ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ನೇತೃತ್ವದಲ್ಲಿ ನೀಡಲಾಯಿತು.

ಈ ಸಂದರ್ಭ ದುಆ ನೆರವೇರಿಸಿ ಮಾತನಾಡಿದ ತರ್ಬಿಯತುಲ್ ಅತ್ಫಾಲ್ ಮದರಸ ಹತ್ತನೇಮೈಲ್ ಕಲ್ಲು ಇದರ ಸದರ್ ಮುಅಲ್ಲಿಮ್ ಮುಸ್ತಫ ಪೈಝಿ ನಶಾತ್ ಸಂಘಟನೆಯ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.

ಅತಿಥಿಗಳಾಗಿ ಭಾಗವಹಿಸಿದ ತ್ವಾಹಾ ಜುಮ್ಮಾ ಮಸೀದಿ ಹತ್ತನೇಮೈಲ್ ಕಲ್ಲು ಅದ್ಯಕ್ಷ ಮೊಹಮ್ಮದ್ ಆಲಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮತ್ತು ಪುದು ಗ್ರಾಪಂ ಮಾಜಿ ಅಧ್ಯಕ್ಷ ಮೊಹಮ್ಮದ್ ಹನೀಫ್ ಈ ಸಂದರ್ಭದಲ್ಲಿ ಮಾತನಾಡಿದರು.

ನಶಾತುದ್ದೀನ್ ಯೂತ್ ಫೆಡರೇಶನ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ಉಪಾಧ್ಯಕ್ಷ ಇಸ್ಮಾಯಿಲ್, ಕೋಶಾಧಿಕಾರಿ ಅನ್ವರ್ ಎಮ್.ಎಮ್,  ತ್ವಾಹಾ ಜುಮಾ ಮಸೀದಿ ಕೋಶಾಧಿಕಾರಿ ಹನೀಫ್ ಬಿ.ಎಚ್., ಅನ್ವರ್ ಬಿ.ಎಚ್. ಈ ಸಂದರ್ಭ ಉಪಸ್ಥಿತರಿದ್ದರು. ಪುದು ಗ್ರಾಪಂ ಸದಸ್ಯ ನಝೀರ್ ಕುಂಜತ್ಕಳ ಸ್ವಾಗತಿಸಿ, ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News