ಸುಳ್ಳು ಸುದ್ಧಿಗಳು ಬಿತ್ತರಿಸಿವ ಮಾಧ್ಯಮಗಳ ವಿರುದ್ಧ ಕ್ರಮಕೈಗೊಳ್ಳಿ: ಮುಹಮ್ಮದ್ ಯಾಸಿರ್ ಫಾಝಿಲ್

Update: 2019-08-21 17:11 GMT

ಬೆಳ್ತಂಗಡಿ: ಗೋವಿಂದೂರು ನಿವಾಸಿ, ಮಂಗಳೂರಿನ ಸಂಸ್ಥೆಯೊಂದರಲ್ಲಿ ಸೇವೆಗೈಯ್ಯುತ್ತಿರುವ ರವೂಪ್ ಎಂಬ ಅಮಾಯಕ ಯುವಕನನ್ನು ರಾಷ್ರೀಯ ತನಿಖಾ ದಳ ತೀವ್ರ ವಿಚಾರಣೆಗೊಳಪಡಿಸಿ ಬಂಧಿಸಿದೆ ಎಂಬುವುದಾಗಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುಳ್ಳು ಸುದ್ಧಿಗಳು ಬಿತ್ತರಿಸಿ ನಾಳ ಮಸೀದಿ ಹಾಗೂ ಊರಿಗೆ ಕಳಂಕ ಹಚ್ಚುವ ಪ್ರಯತ್ನ ನಡೆಯುತ್ತಿದೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹಾಗೂ ಇಂತಹ ಕೆಲಸ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಮಾಅತ್ ಧರ್ಮಗುರುಗಳಾದ ಮುಹಮ್ಮದ್ ಯಾಸಿರ್ ಫಾಝಿಲ್ ಒತ್ತಾಯಿಸಿದ್ದಾರೆ.

ಒಂದು ಪ್ರತ್ಯೇಕ ಸಮೂಹವನ್ನು ಗುರಿಯಾಗಿಸಿ ಕೆಲವು ಮಧ್ಯಮಗಳು ನಡೆಸುತ್ತಿರುವ ಈ ನೀಚ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ ಎಂದರು. ಈ ಬಗ್ಗೆ ಬೆಳ್ತಂಗಡಿ ಪೋಲೀಸರಿಗೆ ದೂರು ನೀಡಿದ್ದು, ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಜಮಾಅತ್ ಅಧ್ಯಕ್ಷ ಅಬ್ಬೋನು ಶಾಫಿ ಪಲ್ಲಾದೆ, ಕಾರ್ಯದರ್ಶಿ ಹಾರಿಸ್ ಕುಕ್ಕುಡಿ, ಸದಸ್ಯ ನಾಸಿರ್ ನಡುತೊಟ್ಟು,  ರವೂಫ್ ಮುಸ್ಲಿಯಾರ್ ಉಪಸ್ಥಿತರಿದ್ದರು.

ಖಂಡನೆ

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಭಯೋತ್ಪಾದನೆಯ ವಿಚಾರದಲ್ಲಿ ಬಂಧಿಸಿದ್ದಾರೆ ಎಂಬಂತಹ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ವಿಚಾರದಬಗ್ಗೆ ತನಿಖೆ ನಡೆಸಿ ಸಾಮಾಜದ ಶಾಂತಿ ಕೆಡವುವು ಇಂತಹ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಕರೀಂ ಗೇರುಕಟ್ಟೆ ಒತ್ತಾಯಿಸಿದ್ದಾರೆ.

ಯಾರಾದರೂ ದೇಶದ್ರೋಹದ ಕೆಲಸ ಮಾಡಿದರೆ ಅಂತವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ ಅದಕ್ಕೆ ನಮ್ಮ ಆಕ್ಷೇಪಣೆಯಿಲ್ಲ. ಆದರೆ ನಿರಪರಾಧಿಗಳನ್ನು ಭಯೋತ್ಪಾದಕರೆಂದು ಚಿತ್ರಿಸುವ ಕಾರ್ಯ ನಿಲ್ಲಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News