ಐಎಎಸ್ ಎನ್ನುವುದು ಕಬ್ಬಿಣದ ಕಡಲೆಯಲ್ಲ: ದೀಪಕ್

Update: 2019-08-21 17:13 GMT

ಭಟ್ಕಳ: ಕೇಂದ್ರ ಲೋಕಾಸೇವಾ ಆಯೋಗವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳು ಕಬ್ಬಿಣದ ಕಡಲೆ ಎಂದು ಭಾವಿಸಿ ಅಂತಹ ಪರೀಕ್ಷೆಗಳ ಕುರಿತು ಭಯಮೂಡಿಸಿಕೊಂಡು ಪರೀಕ್ಷೆಗಳನ್ನು ಎದುರಿಸುವುದು ಸರಿಯಲ್ಲ ಐ.ಎ.ಎಸ್. ಮತ್ತು ಐ.ಪಿ.ಎಸ್ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹದು ಎಂದು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ದೀಪಕ್ ಹೇಳಿದರು.

ಅವರು ಬುಧವಾರ ಇಲ್ಲಿನ ನವಾಯತ್ ಕಾಲೋನಿಯ ರಾಬಿತಾ ಸೂಸೈಟಿ ಸಭಾಂಗಣದಲ್ಲಿ ಭಟ್ಕಳ ಐ.ಎ.ಎಸ್.ಫೌಂಡೇಶನ್ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

8ನೇ ತರಗತಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯನ್ನು ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಅದು ಸುಲಭವಾಗುವುದು. ಐಎಎಸ್ ಪರೀಕ್ಷೆಗಳ ಪಠ್ಯಕ್ರಮವು 8ನೇ ತರಗತಿಯಿಂದ ಪಿ.ಯು.ಸಿ ವರೆಗಿನ ಪಠ್ಯಕ್ರಮಧಾರಿತವಾಗಿರುತ್ತದೆ. ನಾವು ಇಂತಹ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಿ ಯಶಸ್ಸನ್ನು ಗಳಿಸಬಹುವುದು ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ಭಟ್ಕಳ ಐ.ಎ.ಎಸ್.ಫೌಂಡೇಶನ್ ಸ್ಥಾಪಕ ಜೈಲಾನಿ ಮೊಹತೆಶಮ್ ಭಟ್ಕಳದ ಪರಿಸರದಲ್ಲಿ ಇಂತಹ ಒಂದು ಸಂಸ್ಥೆ ಹುಟ್ಟಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಇಲ್ಲಿನ ವಿದ್ಯಾರ್ಥಿಗಳು ಅತ್ಯಂತ ಪ್ರತಿಭಾವಂತರಾಗಿದ್ದು ಎಲ್ಲರೂ ಕೂಡ ಪ್ರಯತ್ನ ಮಾಡಿದರೆ ಐ.ಎ.ಎಸ್ ಅಧಿಕಾರಿಗಳಾಬಹುದು ಎಂದರು.

ವೇದಿಕೆಯಲ್ಲಿ ಸಮೀರ್ ಕೆ.ಎಂ, ಸಾಹಿಲ್ ಆನ್ ಲೈನ್ ವ್ಯವಸ್ಥಾಪಕ ಸಂಪಾದಕ ಇನಾಯತುಲ್ಲಾ ಗವಾಯಿ ಉಪಸ್ಥಿತರಿದ್ದರು. ಮಸಾಬ್ ಆಬೀದಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲಾ ಕಾಲೇಜುಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News