ತೊಕ್ಕೊಟ್ಟು: ನೆರೆ, ಪ್ರವಾಹ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ

Update: 2019-08-21 17:17 GMT

ತೊಕ್ಕೊಟ್ಟು: ಅತಿವೃಷ್ಠಿ, ಅನಾವೃಷ್ಠಿಯಿಂದ ತೊಂದರೆಗೆ ಒಳಗಾದ ಎಲ್ಲ ಕುಟುಂಬಗಳಿಗೆ ಸರಕಾರದಿಂದ ಮಂಜೂರಾದ ಸವಲತ್ತುಗಳನ್ನು ಶೀಘ್ರದಲ್ಲಿಯೇ  ತಲುಪಿಸುವ  ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನೆರೆ, ಪ್ರವಾಹ ಸಂತ್ರಸ್ತರಿಗೆ ತೊಕ್ಕೊಟ್ಟು ಖಾಸಗಿ ಹಾಲ್‌ನಲ್ಲಿ ಅವರು ಬುಧವಾರ ಪರಿಹಾರದ ಚೆಕ್ ವಿತರಿಸಿದರು.

ಪರಿಹಾರ ಸಿಗದ ಕುಟುಂಬಸ್ಥರು ನಿರಾಶೆಯಾಗದೆ ಮೊತ್ತೊಮ್ಮೆ ಅರ್ಜಿ ಸಲ್ಲಿಸಬೇಕು.  ಆ ಕುಟುಂಬಗಳಿಗೆ ಪರಿಹಾರ ಒದಗಿಸುವ ವ್ಯವಸ್ಥೆಯನ್ನು ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿ ಭಾಗಶಃ ಹಾನಿ ಹಾಗೂ ಸೊತ್ತು ನಾಶವಾಗಿರುವ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರದ ನೆಲೆಯಲ್ಲಿ ತಲಾ 10ಸಾವಿರ ರೂ. ಗಳ ಚೆಕ್ ವಿತರಿಸಲಾಯಿತು. ರಾಜ್ಯ ಸರಕಾರದ ನೆರೆ ಪರಿಹಾರ ಯೋಜನೆಯ ಮೂಲಕ ಈ ಪರಿಹಾರದ ಚೆಕ್‌ನ್ನು ವಿತರಿಸಲಾಗಿದ್ದು

1050 ಮಂದಿ ನೆರೆ ಸಂತ್ರಸ್ತರು ಈ ಯೋಜನೆಯ ಫಲಾನುಭವಿಗಳಾಗಿ ಪ್ರಯೋಜನ ಪಡೆದುಕೊಂಡರು. ತಾಲೂಕು ಪಂ. ಅಧ್ಯಕ್ಷ ಮಹಮ್ಮದ್ ಮೋನು, ಉಳ್ಳಾಲ ಪುರಸಭೆಯ ಮಾಜಿ ಅಧ್ಯಕ್ಷ ಯು.ಎ. ಇಸ್ಮಾಯಿಲ್, ನಗರಸಭೆಯ ಮಾಜಿ ಅಧ್ಯಕ್ಷ ಕುಂಞಿ ಮೋನು, ಬಾಜಿಲ್ ಡಿಸೋಜ, ಮಾಜಿ ಉಪಾಧ್ಯಕ್ಷ ದಿನೇಶ್ ರೈ, ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು, ನಗರಸಭೆಯ ಸದಸ್ಯ ಅಯೂಬ್ ಮಂಚಿಲ, ಮಾಜಿ ಸದಸ್ಯ ಮುಸ್ತಫಾ ಅಬ್ದುಲ್ಲ, ಗ್ರಾಮ ಲೆಕ್ಕಿಗರು, ನಗರಸಭೆಯ ಅಽಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮ ಪಂ. ಅಧಿಕಾರಿಗಳು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News