ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಪೆರೋಲ್ ವಿಸ್ತರಣೆ

Update: 2019-08-22 16:17 GMT

ಚೆನ್ನೈ, ಆ.22: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ದೋಷಿಯಾಗಿರುವ ನಳಿನಿ ಶ್ರೀಹರನ್ ಅವರ ಪೆರೋಲ್ ಅವಧಿಯನ್ನು ಮದ್ರಾಸ್ ಹೈಕೋರ್ಟ್ 3 ವಾರ ವಿಸ್ತರಿಸಿದೆ.

ಪೆರೋಲ್ ಅವಧಿ ಆಗಸ್ಟ್ 25ಕ್ಕೆ ಅಂತ್ಯವಾಗಲಿತ್ತು. ಮಗಳ ಮದುವೆಗೆ ಸಿದ್ಧತೆ ನಡೆಸಬೇಕಿರುವ ಕಾರಣ ಆರು ತಿಂಗಳು ಪೆರೋಲ್ ಮಂಜೂರುಗೊಳಿಸಬೇಕೆಂದು ನಳಿನಿ ಅರ್ಜಿ ಸಲ್ಲಿಸಿದ್ದರು. ಆದರೆ, ಒಂದು ತಿಂಗಳ ಪೆರೋಲ್ ಮಂಜೂರುಗೊಳಿಸಿ ಅವರನ್ನು ಜುಲೈ 25ರಂದು ಬಿಡುಗಡೆಗೊಳಿಸಲಾಗಿತ್ತು. ಪೆರೋಲ್ ಸಂದರ್ಭ ಚೆನ್ನೈಯ ರೋಯಪೆಟ್ಟದಲ್ಲಿರುವ ಮನೆಗೆ ತೆರಳಬಾರದು ಎಂದು ನಿರ್ಬಂಧ ವಿಧಿಸಲಾಗಿತ್ತು.

ವೆಲ್ಲೋರ್‌ನ ಸಥುವಚರಿಯಲ್ಲಿರುವ ಮಗಳ ಮನೆಯಲ್ಲಿ ವಾಸಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಪೆರೋಲ್ ಅವಧಿಯನ್ನು 30 ದಿನ ವಿಸ್ತರಿಸಬೇಕೆಂದು ನಳಿನ್ ಆಗಸ್ಟ್ 13ರಂದು ಬಂಧೀಖಾನೆಯ ಡಿಐಜಿಗೆ ಅರ್ಜಿ ಸಲ್ಲಿಸಿದ್ದು ಇದನ್ನು ಡಿಐಜಿ ತಳ್ಳಿಹಾಕಿದ್ದರು. ಬಳಿಕ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಇದಕ್ಕೆ ಪ್ರತಿಕ್ರಿಯಿಸುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರಕಾರಕ್ಕೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News