ರವೂಫ್ ಪರ ನಡೆಯುವ ಹೋರಾಟಕ್ಕೆ ಎಸ್‌ಡಿಪಿಐ ಬೆಂಬಲ
Update: 2019-08-22 22:29 IST
ಮಂಗಳೂರು, ಆ. 22: ಬೆಳ್ತಂಗಡಿ ತಾಲೂಕಿನ ಗೋವಿಂದೂರು ನಿವಾಸಿ ಅಬ್ದುರ್ರವೂಫ್‌ರ ಮೇಲೆ ಆಧಾರ ರಹಿತ ಸುಳ್ಳು ಸುದ್ಧಿಗಳನ್ನು ಹಬ್ಬಿಸಿ ಬಲಿಪಶುವನ್ನಾಗಿಸಿದ ಕೆಲವು ಮಾಧ್ಯಮಗಳ ಭಯೋತ್ಪಾದನೆಯ ವಿರುದ್ಧ ಮತ್ತು ರವೂಫ್ ಪರ ನಡೆಯುವ ಹೋರಾಟಗಳಿಗೆ ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿ ಬೆಂಬಲ ನೀಡಲಾಗುವುದು ಎಂದು ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಸಲ್ಮಾನರನ್ನು ಗುರಿಯಾಗಿಸಿಕೊಂಡು ಮಾಧ್ಯಮಗಳು ನಡೆಸುವ ಇಂತಹ ವ್ಯವಸ್ಥಿತ ಷಡ್ಯಂತ್ರವು ಕೊನೆಗೊಳ್ಳಬೇಕಾಗಿದೆ. ಇಂತಹ ಘಟನೆ ಗಳು ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಹೋರಾಟ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಎಸ್‌ಡಿಪಿಐ ಕಾನೂನು ಹೋರಾಟ ಮಾಡಲೂ ಸಜ್ಜಾಗಿವೆ ಎಂದು ತಿಳಿಸಿದ್ದಾರೆ.