ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ

Update: 2019-08-22 17:07 GMT

ಮಂಗಳೂರು: ವಿದ್ಯಾರ್ಥಿಗಳು ಮೊಬೈಲನ್ನು ಬದಿಗಿರಿಸಿ ಪ್ರತಿನಿತ್ಯವೂ ಕನಿಷ್ಟ ಒಂದೊಂದು ಆಂಗ್ಲ ಹಾಗೂ ಕನ್ನಡ ಪತ್ರಿಕೆಗಳನ್ನು ಓದುವ ಮೂಲಕ ತನ್ನ ಜ್ಞಾನವನ್ನು ನವೀಕರಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ಭೇಟಿ ನೀಡಿ ಉತ್ತಮ ಗ್ರಂಥಗಳನ್ನು ಓದಿ ಮನನ ಮಾಡಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ವಿಜಯವಾಣಿ ದಿನಪತ್ರಿಕೆಯ ಮುಖ್ಯ ವರದಿಗಾರ ಶ್ರೀ ಪಿ.ಬಿ. ಹರೀಶ್ ರೈಯವರು ಬೆಸೆಂಟ್ ಮಹಿಳಾ ಕಾಲೇಜಿನ ಗ್ರಂಥಪಾಲಕರ ಹಾಗೂ ಓದುಗರ ಸಂಘವನ್ನು ಉದ್ಘಾಟಿಸುತ್ತಾ ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ್ ಕುಮಾರ್ ಶೆಟ್ಟಿ ಪಿ. ಯವರು ಗ್ರಂಥಪಾಲಕರ ದಿನದ ಮಹತ್ವದ ಬಗ್ಗೆ ಹಾಗೂ ಎಸ್.ಆರ್. ರಂಗನಾಥನ್ ಅವರು ಗ್ರಂಥಾಲಯ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಯ ಬಗ್ಗೆ ತಿಳಿಸಿ ಅತಿಥಿಗಳನ್ನು ಸ್ವಾಗತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರು ಹಾಗೂ ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ಕೆ. ದೇವಾನಂದ ಪೈ, ಅತ್ಯುತ್ತಮವಾದ ಗ್ರಂಥಾಲಯ ನಮ್ಮ ಕಾಲೇಜಿನಲ್ಲಿದ್ದು ಅದನ್ನು ವಿದಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಗ್ರಂಥಪಾಲಕ ಶ್ರೀ ಲೋಕರಾಜ್ ವಿಟ್ಲ ಅವರು ಎಸ್. ಆರ್. ರಂಗನಾಥನ್ ರವರಿಗೆ ಪ್ರಸ್ತಾವನೆಗಳ ಮೂಲಕ ನುಡಿ ನಮನ ಸಲ್ಲಿಸಿದರು. ಓದುಗರ ಸಂಘದ ಸಂಯೋಜಕಿ ಹಾಗೂ ಸಂಸ್ಕೃತ ವಿಭಾಗ ಮುಖ್ಯಸ್ಥೆ  ತ್ರಿವೇಣಿ ಶೆಟ್ಟಿ ವಂದಿಸಿದರು. ರುಚಿತಾ ಕಾರ್ಯಕ್ರಮ ನಿರೂಪಿಸಿದರು. ಗ್ರಂಥಪಾಲಕರ ದಿನಾಚರಣೆಯ ಅಂಗವಾಗಿ ಪುಸ್ತಕ ಪ್ರದರ್ಶನ ಸಂಯೋಜಿಸಲಾಗಿತ್ತು ಹಾಗೂ 8 ಮಂದಿ ವಿದ್ಯಾರ್ಥಿನಿಯರಿಗೆ ಉತ್ತಮ ಓದುಗ ಪ್ರಶಸ್ತಿ ನೀಡಿ ಗೌರವಿಸಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News