ಮಂಗಳೂರು: ರೈಲು ಬಡಿದು ಅಪರಿಚಿತ ಮೃತ್ಯು

Update: 2019-08-22 17:13 GMT

ಮಂಗಳೂರು, ಆ.22: ರೈಲು ಬಡಿದು ಹಳಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಸುಮಾರು 50-55 ವರ್ಷ ಪ್ರಾಯದ ವ್ಯಕ್ತಿ ಮೃತಪಟ್ಟವರು. ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಸಮೀಪದ ಸೂಟರ್‌ಪೇಟೆ ರೈಲ್ವೆ ಹಳಿಯಲ್ಲಿ ಗುರುವಾರ ನಸುಕಿನಜಾವ 2:30ರ ಸುಮಾರು ರೈಲ್‌ವೊಂದು ತಾಗಿ ಅಪರಿಚಿತ ವ್ಯಕ್ತಿ ಗಂಭೀರ ಗಾಯಗೊಂಡಿದ್ದ. ಆತನನ್ನು ಕೂಡಲೇ ಆ್ಯಂಬುಲೆನ್ಸ್ ಮೂಲಕ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಯಿತು. ಬೆಳಗ್ಗಿನಜಾವ 3:54ಕ್ಕೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಚಹರೆ: 5.4 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಉದ್ದ ಮುಖ, ದಪ್ಪ ಮೂಗು, ತಲೆಯಲ್ಲಿ ಮೂರು ಇಂಚು ಉದ್ದದ ಬಿಳಿ ಕಪ್ಪು ಮಿಶ್ರಿತ ಕೂದಲು ಇರುತ್ತವೆ. ನೀಲಿಬಣ್ಣದ ತುಂಬು ತೋಳಿನ ಶರ್ಟ್, ಕೆಂಪು ಲುಂಗಿ ಧರಿಸುರುತ್ತಾರೆ.

ಮೃತನ ವಾರಸುದಾರರು ಇದ್ದಲ್ಲಿ ಮಂಗಳೂರು ರೈಲ್ವೆ ಪೊಲೀಸ್ ಠಾಣೆ (0824- 2220559, 9480800470) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News