ಮೈ ಕಮ್ಯೂನಿಟಿ ಫೌಂಡೇಶನ್ ಸಭೆ: ‘ಬೈತುಲ್-ಹಮ್ದ್’ ಹೆಸರಲ್ಲಿ ಬಡ ಕುಟುಂಬಕ್ಕೆ ಮನೆ ನೀಡಲು ತೀರ್ಮಾನ

Update: 2019-08-22 17:17 GMT

ಮಂಜೇಶ್ವರ, ಆ.22: ಮೈ ಕಮ್ಯೂನಿಟಿ ಫೌಂಡೇಶನ್ ಸಂಸ್ಥೆಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ‘ಬೈತುಲ್-ಹಮ್ದ್’ ಹೆಸರಲ್ಲಿ 2019-2020ನೇ ಸಾಲಿನಲ್ಲಿ 10 ಅರ್ಹ ಬಡ ಕುಟುಂಬಗಳಿಗೆ ಮನೆಗಳನ್ನು ಕಲ್ಪಿಸಿಕೊಡಲು ತೀರ್ಮಾನ ಕೈಗೊಳ್ಳಲಾಯಿತು.

ಫೌಂಡೇಶನ್‌ನ ಅಧ್ಯಕ್ಷ ಅಶ್ರಫ್ ಅಬ್ಬಾಸ್ ಕುಂಜತ್ತೂರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಮಾಜಿಕ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಿ, ಹಲವು ಯೋಜನೆಗಳ ರೂಪಿಸಲು ನಿರ್ಧರಿಸಲಾಯಿತು. ಮನೆ ನಿರ್ಮಾಣಕ್ಕಾಗಿ 40 ಸೆಂಟ್ಸ್ ಜಮೀನನ್ನು ಟ್ರಸ್ಟಿ ಇಕ್ಬಾಲ್ ಮುಹಮ್ಮದ್ ಮೈ ಕಮ್ಯೂನಿಟಿ ಫೌಂಡೇಶನ್‌ಗೆ ದಾನ ಮಾಡಿದರು.

ಫೌಂಡೇಶನ್ ಈಗಾಗಲೇ ವೈದ್ಯಕೀಯ ಧನ ನೆರವು, ಮಾಸಿಕ ರೇಶನ್ ಕಿಟ್ ವಿತರಣೆ, ವಿದ್ಯಾರ್ಥಿ ವೇತನ, ವಿದ್ಯಾರ್ಥಿಗಳಿಗೆ ಶಿಬಿರ, ಟ್ಯೂಶನ್, ಸರಕಾರಿ ಸೌಲಭ್ಯ, ಮಾಹಿತಿ ಕೇಂದ್ರ ಸೇರಿದಂತೆ ಹಲವು ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ ಎಂದು ಫೌಂಡೇಶನ್‌ನ ಅಧ್ಯಕ್ಷ ಅಶ್ರಫ್ ಅಬ್ಬಾಸ್ ತಿಳಿಸಿದ್ದಾರೆ.

ಸಭೆಯಲ್ಲಿ ಟ್ರಸ್ಟಿಗಳಾದ ಸೂಫಿ ಮುಹಮ್ಮದ್, ಸೈಯದ್ ಅನ್ಸರ್ ತಂಙಳ್, ಅಮೀರ್ ಅಬ್ಬಾಸ್, ಮೊಯಿದೀನ್ ಕುಂಞಿ, ಇಸ್ಮಾಯೀಲ್ ಮುಹಮ್ಮದ್, ಸಂಶೀರ್ ಮುಹಮ್ಮದ್, ಇಕ್ಬಾಲ್ ಮುಹಮ್ಮದ್, ಉಸ್ಮಾನ್ ಖಾದರ್, ಫಾರೂಕ್ ಅಬ್ಬಾಸ್ ಹಾಗೂ ಯೂಥ್ ವಿಂಗ್ ಅಧ್ಯಕ್ಷ ಮುಹಮ್ಮದ್ ಶಫೀಕ್ ಭಾಗವಹಿಸಿದ್ದರು.

ಸಭೆಯಲ್ಲಿ ಕಾರ್ಯದರ್ಶಿ ಮೊಯಿದೀನ್ ಕುಂಞಿ ಲೆಕ್ಕಪತ್ರ ಮಂಡಿಸಿದರು. ಶಾದ್ ಅಹ್ಮದ್ ವರದಿ ಮಂಡಿಸಿದರು. ಅಬ್ದುಲ್ ರಹಿಮಾನ್ ಬಾವ ಮತ್ತು ಅಬ್ದುಲ್ ಹಮೀದ್ ಯೋಜನೆಗಳ ಬಗ್ಗೆ ಸಲಹೆ ನೀಡಿದರು. ಕೋಶಾಧಿಕಾರಿ ಅಮೀರ್ ಅಬ್ಬಾಸ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News