ಮಂಜೇಶ್ವರ: ಉರೂಸ್ ಸಮಾರಂಭಕ್ಕೆ ಚಾಲನೆ

Update: 2019-08-22 17:22 GMT

ಮಂಜೇಶ್ವರ: ಮಳ್‍ಹರ್ ವಿದ್ಯಾ ಸಮುಚ್ಛಯಗಳ ಶಿಲ್ಪಿ, ಹಲವಾರು ಮಹಲ್ಲುಗಳ ಖಾಝಿ ಪಟ್ಟವನ್ನು ಅಲಂಕರಿಸಿದ್ದ ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್-ಬುಖಾರಿ ಉರೂಸ್ ಸಮಾರಂಭಕ್ಕೆ ಮಂಜೇಶ್ವರ ಮಳ್‍ಹರ್ ಕ್ಯಾಂಪಸ್ಸಿನಲ್ಲಿ ಚಾಲನೆ ನೀಡಲಾಯಿತು.

ಸ್ವಾಗತ ಸಮಿತಿಯ ಅಧ್ಯಕ್ಷ ಮುಹಮ್ಮದ್ ಸ್ವಾಲಿಹ್ ಸಅದಿ ತೃಕರಿಪ್ಪುರ್ ಧ್ವಜಾರೋಹಣ ಕಾರ್ಯ ನೆರವೇರಿಸಿದರು. ನಂತರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ಅಲ್-ಬುಖಾರಿ ಕೊೈಲಾಂಡಿ ಪ್ರಾರ್ಥನೆ ನೆರವೇರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಳ್‍ಹರ್ ಜನರಲ್ ಸೆಕ್ರಟರಿ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್-ಬುಖಾರಿ ಮಾತನಾಡಿದರು. ರಾತ್ರಿ ನಡೆದ ಬುರ್ದಾ ಮಜ್ಲಿಸಿನಲ್ಲಿ ಸಯ್ಯಿದ್ ತ್ವಾಹ ಸಖಾಫಿ ಪೂಕೊಟೂರು, ಹಾಫಿಳ್ ಸ್ವಾದಿಖ್ ಅಲಿ ಅಲ್-ಫಾಳಿಲಿ ಗೂಡಲ್ಲೂರು ನೇತೃತ್ವ ವಹಿಸಿದರು.

ಸ್ವಲಾತ್ ಮಜ್ಲಿಸ್ ಹಾಗೂ ಕೂಟು ಪ್ರಾರ್ಥನೆಗೆ ಮಳ್‍ಹರ್ ಸಂಸ್ಥೆಯ ಉಪಾಧ್ಯಕ್ಷ ಸಯ್ಯಿದ್ ಅಬ್ದುರ್ರಹ್ಮಾನ್  ಶಹೀರ್ ಅಲ್-ಬುಖಾರಿ ನೇತೃತ್ವ ನೀಡಿದರು. ಸಯ್ಯಿದ್ ಮುಸ್ತಫಾ ಸಿದ್ದೀಖಿ ಮಂಬುರಂ,ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್, ಎ.ಬಿ ಮೊೈದು ಸಅದಿ ಚೇರೂರು, ಕೊಲ್ಲಂಬಾಡಿ ಅಬ್ದುಲ್ ಖಾದಿರ್ ಸಅದಿ, ಕಾಟಿಪ್ಪಾರ ಅಬ್ದುಲ್ ಖಾದಿರ್ ಸಖಾಫಿ, ಮುಹಮ್ಮದ್ ಸಖಾಫಿ ಪಾತೂರು, ಸುಲೈಮಾನ್ ಸಖಾಫಿ ದೇಶಾಂಕುಳಂ, ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು, ಇಸ್ಮಾಯೀಲ್ ಸಅದಿ ಪಾರಪ್ಪಳ್ಳಿ, ಮರ್ಝೂಖ್ ಸಅದಿ ಪಾಪಿನಶ್ಶೇರಿ, ಉಮರುಲ್ ಫಾರೂಖ್ ಮದನಿ ಮಚ್ಚಂಪಾಡಿ, ಹಸನ್ ಸಅದಿ ಅಲ್-ಅಫ್ಳಲಿ, ಮುಹಮ್ಮದ್ ಸಖಾಫಿ ತೋಕೆ, ಉಸ್ಮಾನ್ ಹಾಜಿ ಮಳ್‍ಹರ್, ಪಳ್ಳಿಕುಂಞಿ ಹಾಜಿ ಪೊಸೋಟ್, ಶೌಕತ್ ಹಾಜಿ ದೇರಳಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News