ಇಸ್ಮಾಯಿಲ್ ಕೃಷ್ಣಾಪುರ ಮರಣೋತ್ತರ ಕಾರ್ಯಕ್ಕೆ ಸಹಕರಿಸಿದ ಸೌದಿ ಅರೇಬಿಯಾ ಕೆಸಿಎಫ್

Update: 2019-08-22 17:27 GMT

ರಿಯಾದ್: ಇಸ್ಮಾಯೀಲ್ ಕೃಷ್ಣಾಪುರ ಎಂಬವರು ಆ. 14 ರಂದು ರಿಯಾದ್ ನಲ್ಲಿ ಕೆಲಸ ಮುಗಿಸಿ ಬರುವ ವೇಳೆ ಕುಸಿದು ಬಿದ್ದ ಪರಿಣಾಮ ಆಸ್ಪತ್ರೆಗೆ ಸಾಗಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.

ಮೃತರ ಮರಣೋತ್ತರ ಕಾರ್ಯವನ್ನು ಕೈಗೊಂಡ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಆಸ್ಪತ್ರೆಯಿಂದ ಎಂಬಸ್ಸಿಯ ತನಕದ ಎಲ್ಲಾ ದಾಖಲೆ ಪತ್ರಗಳನ್ನು ಸರಿಪಡಿಸಿ ಮಸ್ಜಿದುಲ್ ಜವ್ವರ ಅಲ್ ಬಬ್ರೈನ್ ನಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿ ಮಕ್ಬರ ಶಿಮಾಲ್ ನಲ್ಲಿ ದಫನ ಮಾಡಲಾಯಿತು.

ಎಂಬಸ್ಸಿ ಕೆಲಸ ಕಾರ್ಯದಲ್ಲಿ ರಿಯಾದ್ ಝೋನ್ ನಾಯಕರಾದ ನಝೀರ್ ಜಿ.ಕೆ ಕಕ್ಕಿಂಜೆ, ರಮೀಝ್ ಕುಳಾಯಿ ಸಂಪೂರ್ಣವಾಗಿ ಸಹಕರಿಸಿದರೆ ಕೆಸಿಎಫ್ ರಾಷ್ಟ್ರೀಯ ಮುಖಂಡರಾದ ಮಜೀದ್ ವಿಟ್ಲ ನಿರ್ದೇಶನ ನೀಡಿದರು.

ಮೃತರ ಮರಣೋತ್ತರ ಕಾರ್ಯದಲ್ಲಿ ಸಹಕರಿಸಿದ ಕೆಸಿಎಫ್ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದ ಕುಟುಂಬಸ್ತರು ಇದೊಂದು ಶ್ಲಾಘಣೀಯ ಸೇವೆಯಾಗಿರುತ್ತದೆ. ಪ್ರವಾಸಿಯಾಗಿ ನಿಮ್ಮ ಕೆಲಸ ಕಾರ್ಯಗಳನ್ನೆಲ್ಲ ಬದಿಗಿಟ್ಟು ಇನ್ನೊಬ್ಬರ ಸಹಾಯಕ್ಕೆ ಬರುವುದು ಎಲ್ಲರಿಗೂ ಸಾಧ್ಯವಿರುವುದಲ್ಲ ಇದು ಅನಿವಾಸಿ ಕನ್ನಡಿಗರು ಹೆಮ್ಮೆ ಪಡುವಂತಹ ಉತ್ತಮ ಸೇವೆಯಾಗಿರುತ್ತದೆ ಎಂದು ಹೇಳಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.

ಮೃತರ ಅಂತ್ಯಕ್ರಿಯೆಯಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಸಂಘಟನೆ ಇಲಾಖೆಯ ಕನ್ವೀನರ್ ಬಶೀರ್ ತಲಪಾಡಿ, ಝೋನ್ ಮುಖಂಡರಾದ ಹನೀಫ್ ಕಣ್ಣೂರು, ಇಸ್ಮಾಯಿಲ್ ಕನ್ನಂಗಾರು, ಟಿಎಚ್ ಹಬೀಬ್ ತೆಕ್ಕಾರು, ಶಮೀರ್ ಜೆಪ್ಪು,ಹಾಗೂ ಮ್ರತರ ಪುತ್ರ ಮುಹಮ್ಮದ್ ಶಫೀಖ್ ಕ್ರಷ್ಣಾಪುರ, ಹುಸೈನ್ ಜಿದ್ದಾ, ಹಕೀಮ್ ಜಿದ್ದಾ, ಶಾಫಿ ಕಾಟಿಪಳ್ಳ, ಫೈಝಲ್ ಜಿದ್ದಾ, ಸಹಿತ ಹಲವು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ಧಾರ್ಮಿಕ ವಿಧಿವಿಧಾನಗಳಿಗೆ ನಝೀರ್ ಉಸ್ತಾಧ್ ನಂದಾರ್, ಪಿಕೆ ದಾವೂದ್ ಸಅದಿ ಉರುವಾಲು ಪದವು ನೇತೃತ್ವ ನೀಡಿದರು. ಮೃತರು ಪತ್ನಿ ಮತ್ತು ಓರ್ವ ಪುತ್ರಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News