ವಿದ್ಯಾರ್ಥಿಗಳು ವಿಭಿನ್ನ ಕೌಶಲ್ಯವನ್ನು ಹೊಂದಿರಬೇಕು: ಟಿ ವಿ ರಾಮಚಂದ್ರ

Update: 2019-08-22 17:35 GMT

ಮಿಜಾರು: ಪ್ರಸ್ತುತ ವಿದ್ಯಮಾನದಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯವನ್ನು ವಿಮರ್ಶಿಸಲು ಕಲಿಯಬೇಕು ಎಂದು ಐಐಎಸ್‍ಸಿಯ ವಿಜ್ಞಾನಿ ಮತ್ತು ಮ್ಯಾನ್ ಆಫ್ ಬೆಂಗಳೂರು 2018 ಪ್ರಶಸ್ತಿ ಪಡೆದ ಡಾ. ಟಿ ವಿ ರಾಮಚಂದ್ರ ಅವರು ಹೇಳಿದರು.

ಆಳ್ವಾಸ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್  ವಿದ್ಯಾರ್ಥಿಗಳಿಗೆ   ಆಗಷ್ಟ್ 22 ರಿಂದ 25 ರವರೆ ಆಯೋಜಿಸಲಾಗಿದ್ದ ಫ್ರೀ ಆ್ಯಂಡ್ ಓಪನ್ ಸೋರ್ಸ್ ಜೀಯೊಸ್ಪೇಷಿಯಲ್ ಟೆಕ್ನಾಲಜೀಸ್ ಫಾರ್ ನ್ಯಾಚುರಲ್ ರಿಸೋರ್ಸ್‍ಸ್ ಮ್ಯಾನೇಜೆಮೆಂಟ್ ತರಬೆತಿ ಶಿಬಿರವನ್ನು ಉದ್ಗಾಟಿಸಿ ಮಾತನಾಡಿದರು.

ಆಧುನಿಕಯುಗದಲ್ಲಿ ಪ್ರತಿಯೊಬ್ಬ ಯುವಜನತೆಯು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದು  ಅತ್ಯಗತ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರು ವೃತ್ತಿಪರರಾಗುವುದಲ್ಲದೇ, ವಿವಿಧ ಕೌಶಲ್ಯಗಳನ್ನು ಹೊಂದುವುದು ಮುಖ್ಯ. ಹಣವೊಂದೆ ಜೀವನದ ಪರಮೋಚ್ಛ ಗುರಿಯಾಗದೇ, ನಮ್ಮ ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ನಮ್ಮ ಬೆಳವಣಿಗೆ ಸಾಧ್ಯಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅವರದೇ ಆದ ವಿಭಿನ್ನ ಕೌಶಲ್ಯವನ್ನು ಹೊಂದಿರಬೇಕು. ಪ್ರಸಕ್ತ ಕಾಲಘಟ್ಟದಲ್ಲಿ ಜ್ಞಾನ ಮತ್ತು ಸೃಜನಶಿಲತೆಯನ್ನು ಹೊಂದಿರು ವುದಲ್ಲದೆ, ಹೊಸ ವಿಚಾರಗಳ ವಿಮರ್ಶೆ ಮಾಡುವ ಸ್ವಂತಿಕೆಯು ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಎಚ್ ಅಜಿತ್ ಹೆಬ್ಬಾರ್ ಹಾಗೂ ವಿಭಾಗದ ಇನ್ನಿತರ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರೀಯಾ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News