ಬೆಳ್ತಂಗಡಿ: ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಯನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ ತಹಶೀಲ್ದಾರ್

Update: 2019-08-22 17:47 GMT

ಬೆಳ್ತಂಗಡಿ: ಪ್ರಾವಹಕ್ಕೆ ಸೇತುವೆ ಕೊಚ್ಚಿಹೋಗಿರುವ ಬಾಂಜಾರುಮಲೆಯ ಮಲೆಕುಡಿಯರ ಕಾಲನಿಯಲ್ಲಿ ಐತಪ್ಪ ಮಲೆಕುಡಿಯ ಎಂಬವರು ಅನಾರೋಗ್ಯಕ್ಕೆ ತುತ್ತಾಗಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲು ಯಾವುದೇ ವಾಹನವ್ಯಸ್ಥೆ ಇಲ್ಲದೆ ಜನರು ಪರದಾಡಿದರು. ಈ ವೇಳೆಗ ಸ್ಥಳೀಯರು ತಹಶೀಲ್ದಾರರಿಗೆ ಕರೆ ಮಾಡಿದಾಗ ಸ್ಪಂದಿಸಿದ ಅವರು ಕೂಡಲೇ ಅಪಾಯಕಾರಿಯಾಗಿರುವ ಚಾರ್ಮಾಡಿ ಘಾಟಿಯ ಮೂಲಕ ಆಗಮಿಸಿ ಕುಸಿದ ಸೇತುವೆಯ ಬಳಿಗೆ ಬಂದು ಅವರನ್ನು ತಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.

ಸೇತುವೆ ಕುಸಿಯುವುದರೊಂದಿಗೆ ಚಾರ್ಮಾಡಿ ಘಾಟಿಯೂ ಅಪಾಯಕಾರಿ ಸ್ಥಿತಿಯಲ್ಲಿ ಇರುವುದರಿಂದ ಯಾವುದೇ ವಾಹನಗಳು ಇಲ್ಲಿಗೆ ಬರಲು ನಿರಾಕರಿಸಿದ್ದರು. ಇಂದು ಬಾಂಜಾರು ಮಲೆಗೆ ಪರ್ಯಾಯ ರಸ್ತೆಯ ಬಗ್ಗೆ ಪರಿಶೀಲಿಸಲು ತಹಶೀಲ್ದಾರರು ನೆರಿಯ ಮಾರ್ಗವಾಗಿ ತೆರಳಿದ್ದರು.

ರಸ್ತೆಯನ್ನು ಪರಿಶೀಲಿಸಿದ ತಹಶೀಲ್ದಾರರು ಕೂಡಲೇ ಕಾಮಗಾರಿಯನ್ನು ಆರಂಭಿಸುವಂತೆ ಸೂಚಿಸಿದ್ದಾರೆ. ಇದಾದ ಬಳಿಕ ಹಿಂತಿರುಗುತ್ತಿದ್ದ ವೇಳೆ ಐತಪ್ಪ ಮಲೆಕುಡಿಯ ಅವರು ತೀವ್ರ ಜ್ವರ ಹಾಗೂ ಉಬ್ಬಸದಿಂದ ಬಳಲುತ್ತಿರುವ ವಿಚಾರ ತಿಳಿದು ಅಲ್ಲಿಗೆ ತೆರಳಿ ಅವರನ್ನು ತಮ್ಮ ವಾಹನದಲ್ಲಿ ರಾತ್ರಿಯ ವೇಳೆ ಕರೆತಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News