ಕುಲಶೇಖರ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ: ರೈಲು ಯಾನ ರದ್ದು

Update: 2019-08-23 09:27 GMT

ಮಂಗಳೂರು, ಆ.23: ಮಂಗಳೂರು-ಗೋವಾ-ಮುಂಬೈ ಮಧ್ಯೆ ಸಂಪರ್ಕ ಕಲ್ಪಿಸುವ ರೈಲು ಹಳಿಯ ಮೇಲೆ ಕುಲಶೇಖರ ಬಳಿ ಗುಡ್ಡ ಕುಸಿದ ಪರಿಣಾಮ ಹಲವು ರೈಲುಗಳ ಯಾನ ರದ್ದಾದ ಘಟನೆ ಶುಕ್ರವಾರ ನಡೆದಿದೆ.

ಕಳೆದ ಎರಡು ವಾರದಿಂದ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಕುಲಶೇಖರ ಬಳಿ ಗುಡ್ಡ ಕುಸಿಯಿತು. ಇದರಿಂದ ಮಂಗಳೂರಿನಿಂದ ಗೋವಾ-ಮುಂಬೈ ಮಧ್ಯೆ ಓಡಾಡುವ ರೈಲುಗಳ ಯಾನವನ್ನು ರದ್ದುಗೊಳಿಸಲಾಗಿದೆ.

ಗೋವಾ-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರೈಲು ತೋಕೂರು ಬಳಿ ನಿಲುಗಡೆಯಾದರೆ, ನೇತ್ರಾವತಿ ಎಕ್ಸ್‌ಪ್ರೆಸ್ ರೈಲು ಜೋಕಟ್ಟೆಯಲ್ಲಿ ನಿಂತಿವೆ. ಮುಂಬೈಯಿಂದ ಬಂದ ಮತ್ಯಗಂಧ ರೈಲು ಸುರತ್ಕಲ್ ಬಳಿ ನಿಂತಿವೆ.

ಉಳಿದಂತೆ ಈ ಹಳಿಯ ಮೂಲಕ ಚಲಿಸುವ ಎಲ್ಲಾ ರೈಲುಗಳ ಯಾನವನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಜೆಸಿಬಿ ಬಳಸಿ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News