ಉಡುಪಿ: ಹುಲಿವೇಷಧಾರಿಗಳೊಂದಿಗೆ ಹೆಜ್ಜೆ ಹಾಕಿ ಕುಣಿದ ನಟ ರಕ್ಷಿತ್ ಶೆಟ್ಟಿ

Update: 2019-08-23 11:53 GMT

ಉಡುಪಿ, ಆ. 23: ‘ಉಳಿದವರು ಕಂಡಂತೆ’ ಚಿತ್ರದ ಮೂಲಕ ರಾಜ್ಯದಾದ್ಯಂತ ಉಡುಪಿಯ ಹುಲಿವೇಷದ ಕ್ರೇಜ್ ಹೆಚ್ಚಿಸಿದ್ದ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಅಷ್ಟಮಿಯ ಹುಲಿ ವೇಷಧಾರಿಗಳ ಜೊತೆ ಹೆಜ್ಜೆ ಹಾಕಿ ಕುಣಿದಿರುವ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೊಲ್ಲೂರು ದೇವಸ್ಥಾನದಲ್ಲಿ ಕುಟುಂಬದ ಪೂಜೆಯ ಹಿನ್ನೆಲೆಯಲ್ಲಿ ಉಡುಪಿಯ ಅಲೆವೂರಿನಲ್ಲಿರುವ ತನ್ನ ಮನೆಗೆ ಬಂದಿದ್ದ ರಕ್ಷಿತ್ ಇಂದು ಕೊರಂಗ್ರಪಾಡಿ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕೊರಂಗ್ರಪಾಡಿಯ ಜೂನಿಯರ್ ಫ್ರೆಂಡ್ಸ್ ಹುಲಿವೇಷಧಾರಿಗಳೊಂದಿಗೆ ಹೆಜ್ಜೆ ಹಾಕಿ ಕುಣಿದಿದ್ದಾರೆ.

ಇದೇ ಹುಲಿ ವೇಷಧಾರಿ ತಂಡ ರಕ್ಷಿತ್ ಶೆಟ್ಟಿಯ ‘ಉಳಿದವರು ಕಂಡಂತೆ’ ಸಿನೆಮಾದಲ್ಲಿ ಹುಲಿವೇಷ ಹಾಕಿರುವುದು ಗಮನಾರ್ಹ. ಇದೀಗ ಈ ವೀಡಿಯೊ ಸಖತ್ ವೈರಲ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News