ಅಮೆರಿಕ ತೈವಾನ್‌ಗೆ ಎಫ್-16 ಮಾರಿದರೆ ಚೀನಾ ಕೈಕಟ್ಟಿ ಕುಳಿತುಕೊಳ್ಳದು: ಚೀನಾ ಸೇನಾಧಿಕಾರಿ ಎಚ್ಚರಿಕೆ

Update: 2019-08-23 14:53 GMT

ಬೀಜಿಂಗ್, ಆ. 23: ಸುಧಾರಿತ ಎಫ್-16ವಿ ಯುದ್ಧ ವಿಮಾನಗಳನ್ನು ತೈವಾನ್‌ಗೆ ಮಾರಾಟ ಮಾಡುವ ಯೋಜನೆಯೊಂದಿಗೆ ಅಮೆರಿಕ ಮುಂದುವರಿದರೆ ಚೀನಾ ‘ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ’ ಎಂದು ಚೀನಾದ ಸೇನಾಧಿಕಾರಿ ಮೇಜರ್ ಜನರಲ್ ಚೆನ್ ರೊಂಗ್ಡಿ ಹೇಳಿದ್ದಾರೆ.

‘‘ಚೀನಾ ತೈವಾನನ್ನು ತನ್ನದೇ ಭೂಭಾಗವಾಗಿ ಪರಿಗಣಿಸಿದೆ ಹಾಗೂ ಅಗತ್ಯ ಬಿದ್ದರೆ ಬಲಪ್ರಯೋಗದ ಮೂಲಕ ಅದನ್ನು ವಶಪಡಿಸಿಕೊಳ್ಳುತ್ತದೆ. ಯುದ್ಧ ವಿಮಾನಗಳ ಮಾರಾಟವು, ತೈವಾನ್ ವಿಷಯದಲ್ಲಿ ಈ ಹಿಂದೆ ಚೀನಾವು ಅಮೆರಿಕಕ್ಕೆ ನೀಡಿರುವ ವಾಗ್ದಾನಗಳ ಉಲ್ಲಂಘನೆಯಾಗಿದೆ ಎಂದು ಚೀನಾ ಪರಿಗಣಿಸುತ್ತದೆ’’ ಎಂದು ಸೇನಾ ವಿಜ್ಞಾನಗಳ ಅಕಡೆಮಿಯಲ್ಲಿರುವ ಯುದ್ಧಾಧ್ಯಯನಗಳ ಸಂಸ್ಥೆಯ ಮುಖ್ಯಸ್ಥರು ಹೇಳಿದರು.

ಒಂದು ವೇಳೆ, ತೈವಾನ್‌ಗೆ ಎಫ್-16ವಿ ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ತನ್ನ ಯೋಜನೆಯೊಂದಿಗೆ ಅಮೆರಿಕ ಮುಂದೆ ಸಾಗಿದರೆ ಚೀನಾ ಏನು ಮಾಡುತ್ತದೆ ಎಂಬ ವಿವರಗಳನ್ನು ಅವರು ನೀಡಲಿಲ್ಲ.

ಚೀನಾದ ಅಧಿಕೃತ ಪತ್ರಕರ್ತರ ಸಂಘವು ಗುರುವಾರ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘‘ಚೀನಾವು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News