ಬಜ್ಪೆ: ಆ.25ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2019-08-23 15:03 GMT

ಮಂಗಳೂರು, ಆ. 23: ಬಜ್ಪೆ ಸಂತ ಜೋಸೆಫ್ ಚರ್ಚ್ ಆಶ್ರಯದಲ್ಲಿ ಸೊಸೈಟಿ ಆಫ್ ಸೈಂಟ್ ವಿನ್ಸೆಂಟ್ ದಿ ಪಾವ್ಲ್ ಬಜ್ಪೆ ಘಟಕದ ಸಹಭಾಗಿತ್ವದೊಂದಿಗೆ, ಮಂಗಳೂರು ಪ್ರವರ್ತಿತ ಆಶೀರ್ವಾದ ಮಹಾಸಂಘ (ಸಿಒಡಿಪಿ) ಹಾಗೂ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಂಕನಾಡಿ ಇವರ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವು ಪೆರೋಕಿಯಲ್ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆ. 25ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ತನಕ ನಡೆಯಲಿದೆ. 

ಈ ಉಚಿತ ಆರೋಗ್ಯ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ, ಸಕ್ಕರೆ ಕಾಯಿಲೆ ತಪಾಸಣೆ, ಹೃದಯ ಸಂಬಂಧಿ ಕಾಯಿಲೆ ತಪಾಸಣೆ, ಇ.ಸಿ.ಜಿ ಹಾಗೂ ಚರ್ಮರೋಗ ತಪಾಸಣೆ ಲಭ್ಯವಿದ್ದು, ತಜ್ಞ ವೈದ್ಯರು ತಪಾಸಣೆ ನಡೆಸಿ ಉಚಿತ ಸಲಹೆ ನೀಡುವರು.

ಈ ಶಿಬಿರದಲ್ಲಿ ಕನ್ನಡಕದ ಆಗತ್ಯವಿದ್ದವರಿಗೆ ಉಚಿತವಾಗಿ ಕನ್ನಡಕ ನೀಡಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News