ಹಾಂಕಾಂಗ್ ಪ್ರತಿಭಟನೆಗಳ ವಿರುದ್ಧ ಅಭಿಯಾನ: 210 ಯೂಟ್ಯೂಬ್ ಚಾನೆಲ್‌ಗಳನ್ನು ಬಂದ್ ಮಾಡಿದ ಗೂಗಲ್

Update: 2019-08-23 15:09 GMT

ಸಾನ್‌ಫ್ರಾನ್ಸಿಸ್ಕೊ, ಆ. 23: ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳಿಗೆ ವಿರುದ್ಧವಾಗಿ ನಡೆಯುತ್ತಿರುವ ಆಂದೋಲನವೊಂದರ ಭಾಗವೆಂಬಂತೆ ಕಂಡುಬರುತ್ತಿರುವ ಹಲವಾರು ಯೂಟ್ಯೂಬ್ ಚಾನೆಲ್‌ಗಳನ್ನು ಮುಚ್ಚಿರುವುದಾಗಿ ಗೂಗಲ್ ಗುರುವಾರ ಹೇಳಿದೆ.

ಗೂಗಲ್, ಯೂಟ್ಯೂಬ್‌ನ ಮಾತೃಸಂಸ್ಥೆಯಾಗಿದೆ.

ಹಾಂಕಾಂಗ್‌ನ ಪ್ರಜಾಪ್ರಭುತ್ವಪರ ಚಳವಳಿಯ ವಿಶ್ವಾಸಾರ್ಹತೆಯನ್ನು ಕೆಡಿಸಲು ಹಾಗೂ ನಗರದಲ್ಲಿ ರಾಜಕೀಯ ಭಿನ್ನಮತವನ್ನು ಹುಟ್ಟುಹಾಕಲು ನಡೆಯುತ್ತಿರುವ ಸಾಮಾಜಿಕ ಮಾಧ್ಯಮ ಅಭಿಯಾನಕ್ಕೆ ಚೀನಾ ಸರಕಾರ ಬೆಂಬಲ ನೀಡುತ್ತಿದೆ ಎಂದು ಟ್ವಿಟರ್ ಮತ್ತು ಫೇಸ್‌ಬುಕ್ ಆರೋಪಿಸಿದ ಬಳಿಕ ಯೂಟ್ಯೂಬ್ ಇದೇ ಮಾದರಿಯನ್ನು ಅನುಸರಿಸಿದೆ.

ಹಾಂಕಾಂಗ್ ಪ್ರತಿಭಟನೆಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ಅಪ್‌ಲೋಡ್ ಮಾಡುವಾಗ ಸಂಘಟಿತ ರೀತಿಯಲ್ಲಿ ವರ್ತಿಸುತ್ತಿವೆ ಎಂದು ಕಂಡುಬಂದ 210 ಯೂಟ್ಯೂಬ್ ಚಾನೆಲ್‌ಗಳನ್ನು ಗೂಗಲ್ ಮುಚ್ಚಿದೆ.

‘‘ಈ ಯೂಟ್ಯೂಬ್ ಚಾನೆಲ್‌ಗಳ ನಡವಳಿಕೆಯು ಇತ್ತೀಚೆಗೆ ಫೇಸ್‌ಬುಕ್ ಮತ್ತು ಟ್ವಿಟರ್ ವರದಿ ಮಾಡಿದ ಚೀನಾದ ನಡವಳಿಕೆಗಳು ಮತ್ತು ಕೃತ್ಯಗಳಿಗೆ ಹೋಲುತ್ತಿತ್ತು’’ ಎಂದು ಗೂಗಲ್‌ನ ಭದ್ರತಾ ಬೆದರಿಕೆ ವಿಶ್ಲೇಷಣೆ ಗುಂಪಿನ ಶೇನ್ ಹಂಟ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News