ಅಮೆರಿಕದ ಸರಕುಗಳ ಆಮದು ತೆರಿಗೆ ಹೆಚ್ಚಿಸಿದ ಚೀನಾ

Update: 2019-08-23 15:44 GMT

ಬೀಜಿಂಗ್, ಆ. 23: ಚೀನಾದ ಸರಕುಗಳ ಆಮದಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ತೆರಿಗೆಗೆ ಪ್ರತೀಕಾರವಾಗಿ ಚೀನಾ ಶುಕ್ರವಾರ ಅಮೆರಿಕದಿಂದ ಆಮದು ಮಾಡಿಕೊಳ್ಳುವ 75 ಬಿಲಿಯ ಡಾಲರ್ ಸರಕಿನ ಮೇಲೆ ತೆರಿಗೆ ಹೆಚ್ಚಳವನ್ನು ಘೋಷಿಸಿದೆ.

ಇದರೊಂದಿಗೆ ಉಭಯ ದೇಶಗಳ ನಡುವಿನ ವ್ಯಾಪಾರ ಸಮರ ತೀವ್ರಗೊಂಡಿದ್ದು, ಜಾಗತಿಕ ಆರ್ಥಿಕತೆ ಹಿನ್ನಡೆ ಅನುಭವಿಸುವ ಬೆದರಿಕೆ ಎದುರಾಗಿದೆ.

ಎರಡು ಮಾದರಿಯ ಉತ್ಪನ್ನಗಳಿಗೆ ಕ್ರಮವಾಗಿ 10 ಶೇಕಡ ಮತ್ತು 5 ಶೇಕಡ ಹೆಚ್ಚುವರಿ ತೆರಿಗೆಯನ್ನು ಚೀನಾ ಘೋಷಿಸಿದ್ದು, ಅದು ಕ್ರಮವಾಗಿ ಸೆಪ್ಟಂಬರ್ 1 ಮತ್ತು ಡಿಸೆಂಬರ್ 15ರಂದು ಜಾರಿಗೆ ಬರಲಿವೆ ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News