ಚೀನಾ, ಪಾಕ್‌ನಲ್ಲಿ ಅಲ್ಪಸಂಖ್ಯಾತರಿಗೆ ಹಿಂಸೆ: ವಿಶ್ವಸಂಸ್ಥೆ

Update: 2019-08-23 15:48 GMT

ವಿಶ್ವಸಂಸ್ಥೆ, ಆ. 23: ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾಚಾರಕ್ಕಾಗಿ ಚೀನಾ ಮತ್ತು ಪಾಕಿಸ್ತಾನವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಗುರುವಾರ ಖಂಡಿಸಿದೆ.

ಈ ದೇಶಗಳಲ್ಲಿ ಕ್ರೈಸ್ತರು, ಅಹ್ಮದೀಯರು, ಉಯಿಘರ್‌ಗಳು ಮತ್ತು ಇತರ ಜನಾಂಗೀಯ ಅಲ್ಪಸಂಖ್ಯಾತರು ಹಿಂಸೆಗೆ ಗುರಿಯಾಗುತ್ತಿದ್ದಾರೆ ಎಂದು ಅಮೆರಿಕ ಮತ್ತು ಬ್ರಿಟನ್ ಮುಂತಾದ ಪಾಶ್ಚಾತ್ಯ ದೇಶಗಳು ಬಣ್ಣಿಸಿವೆ.

‘‘ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಹಿಂಸಾಚಾರಕ್ಕೆ ಗುರಿಯಾಗುವುದು ಮುಂದುವರಿದಿದೆ. ಅವರು ಒಂದೋ ಸರಕಾರೇತರ ವ್ಯಕ್ತಿಗಳಿಂದ ಹಿಂಸೆಗೊಳಗಾಗುತ್ತಾರೆ ಅಥವಾ ತಾರತಮ್ಯಕರ ಕಾನೂನುಗಳು ಮತ್ತು ಸಂಪ್ರದಾಯಗಳಿಂದ ಶೋಷಣೆಗೊಳಗಾಗುತ್ತಾರೆ’’ ಎಂದು ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ಅಮೆರಿಕದ ಪ್ರತಿನಿಧಿ ಸಾಮುಯೆಲ್ ಬ್ರೌನ್‌ಬ್ಯಾಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News