ಉಡುಪಿ ಶ್ರೀಕೃಷ್ಣ ಮಠದಲ್ಲಿ ಮುದ್ದುಕೃಷ್ಣರ ಕಲರವ

Update: 2019-08-23 15:57 GMT

ಉಡುಪಿ, ಆ.23: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಅಂಗವಾಗಿ ಇಂದು ಕೃಷ್ಣ ಮಠದಲ್ಲಿ ವಿವಿಧ ವಯೋಮಾನದ ಮಕ್ಕಳಿಗಾಗಿ ಕೃಷ್ಣ ವೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಮಠದ ರಾಜಾಂಗಣದಲ್ಲಿ ಮುದ್ದುಕೃಷ್ಣ, ಅನ್ನಬ್ರಹ್ಮದಲ್ಲಿ ಕಿಶೋರ ಕೃಷ್ಣ ಹಾಗೂ ಭೋಜನಶಾಲೆಯಲ್ಲಿ ಬಾಲಕೃಷ್ಣ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಶ್ರೀಕೃಷ್ಣನ ಬಾಲ್ಯಲೀಲೆಗಳನ್ನು ಪ್ರದರ್ಶಿಸಿದರು. ಈ ಮೂರು ಸ್ಪರ್ಧೆಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದರು.

ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಸ್ಪರ್ಧೆಯನ್ನು ವೀಕ್ಷಿಸಿ ಸ್ಪರ್ಧಾಳುಗಳನ್ನು ಅನುಗ್ರಹಿಸಿದರು.

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದಲ್ಲಿ ವೇಷಗಳ ದಂಡೆ ಕಂಡುಬರುತ್ತಿವೆ. ಹುಲಿವೇಷ ತಂಡಗಳು, ವೈಯಕ್ತಿಕವಾದ ಯಕ್ಷಗಾನ, ರಾಕ್ಷಸ ಹಾಗೂ ಕಾಲ್ಪನಿಕ ವೇಷಗಳು ಗಮನ ಸೆಳೆದವು. ಅದೇ ರೀತಿ ರಥಬೀದಿಯಲ್ಲಿ ಹೂವುಗಳ ಮಾರಾಟ ಸೇರಿದಂತೆ ವಿವಿಧ ವ್ಯಾಪಾರಗಳು ಭರ್ಜರಿಯಾಗಿ ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News