ಶ್ರೀಕೃಷ್ಣ ಜನ್ಮಾಷ್ಟಮಿ- ಮೊಸರುಕುಡಿಕೆಗೆ ಉಡುಪಿ ನಗರದಲ್ಲಿ ಬಂದೋಬಸ್ತ್

Update: 2019-08-23 16:00 GMT

ಉಡುಪಿ, ಆ.23: ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರುಕುಡಿಕೆ ಕಾರ್ಯ ಕ್ರಮದ ಸಂಬಂಧ ಉಡುಪಿ ನಗರದಲ್ಲಿ ಭಕ್ತಾಧಿಗಳಿಗೆ ಯಾವುದೇ ತೊಂದರೆ ಹಾಗೂ ಅಹಿತಕರ ಘಟನೆ ಸಂಭವಿಸದಂತೆ ವ್ಯಾಪಕ ಬಂದೋಬಸ್ತ್ ಹಾಗೂ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಬಂದೋಬಸ್ತ್‌ಗಾಗಿ ಒಬ್ಬರು ಡಿವೈಎಸ್ಪಿ, ನಾಲ್ಕು ಪೊಲೀಸ್ ನಿರೀಕ್ಷಕರು, 12 ಪೊಲೀಸ್ ಉಪನಿರೀಕ್ಷರು, 39 ಸಹಾಯಕ ಪೊಲೀಸ್ ಉಪನಿರೀಕ್ಷಕರು, 236 ಪೊಲೀಸ್ ಸಿಬ್ಬಂದಿ, 40 ಹೋಂ ಗಾರ್ಡ್, ಒಂದು ಕ್ವಿಕ್ ರಿಯಾಕ್ಷನ್ ಟೀಮ್, ಒಂದು ವಿದ್ವಂಸಕ ಕೃತ್ಯ ತಪಾಸಣಾ ತಂಡ, ಮೂರು ಜಿಲ್ಲಾ ಸಶಸ್ತ್ರ ಪಡೆ ಹಾಗೂ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

ದೇವಸ್ಥಾನ, ಕಾರ್ಯಕ್ರಮಗಳ ಸ್ಥಳ, ಅನ್ನ ಸಂತರ್ಪಣೆ, ರಥಬೀದಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಂದೋಬಸ್ತ್ ಬಗ್ಗೆ ಅಧಿಕಾರಿ/ಸಿಬಂದಿಯವರನ್ನು ನಿಯುಕ್ತಿ ಗೊಳಿಸಲಾಗಿದ್ದು, ಸಂಚಾರ ನಿಯಂತ್ರಣಕ್ಕೆ ಸಂಚಾರ ವಿಭಾಗದ ಅಧಿಕಾರಿ/ ಸಿಬಂದಿಯವರನ್ನು ಬಳಸಿಕೊಳ್ಳಲಾಗಿದೆ. ದ್ವಿಚಕ್ರ ಮೊೆ ಲ್ ರೌಂಡ್ಸ್ ವ್ಯವಸ್ಥೆ ಯನ್ನೂ ಜಾರಿಗೊಳಿಸಲಾಗಿದೆ.

ಆಯಕಟ್ಟಿನ ಎಂಟು ಕಡೆಗಳಲ್ಲಿ ವಿಡಿಯೋಗ್ರಫಿಯನ್ನು ನಡೆಸಲಾಗುವುದು ಹಾಗೂ ಎರಡು ವಿಡಿಯೋಗ್ರಫಿಯನ್ನು ಮೊಸರುಕುಡಿಕೆ ಮೆರವಣಿಗೆಯಲ್ಲಿ ಬಳಸಿಕೊಳ್ಳಲಾಗುವುದು. ಅಲ್ಲದೆ ಸಿಸಿ ಕೆಮರಾ ವೀಕ್ಷಣೆಗೆ ಸಿಬಂದಿಯನ್ನು ನೇಮಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

ಐಕಾನ್ ಹಾಗೂ ಕ್ಯಾಪ್ಟನ್ ಎಂಬ ಶ್ವಾನಗಳೊಂದಿಗೆ ಎರಡು ಶ್ವಾನದಳ ತಂಡಗಳು ಉಡುಪಿಯ ಶ್ರೀಕೃಷ್ಣ ಮಠ ಸೇರಿದಂತೆ ನಗರದ ವಿವಿಧೆ ಕಡೆಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ತಪಾಸಣಾ ಕಾರ್ಯ ನಡೆಸಿವೆ ಎಂದು ತಿಳಿದು ಬಂದಿದೆ.

ಸಾರ್ವಜನಿಕರಿಗೆ ಸೂಚನೆಗಳು

ಕೃಷ್ಟ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರು ತಮ್ಮ ವಾಹನಗಳನ್ನು ಕಲ್ಸಂಕ ರಾಯಲ್ ಗಾರ್ಡನ್‌ನಲ್ಲಿ ಪಾರ್ಕಿಂಗ್ ಮಾಡಬೇಕು. ಚಿನ್ನಾಭರಣ ಹಾಗೂ ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಯಾವುದೇ ವದಂತಿಗಳಿಗೆ ಕಿವಿಗೊಡ ಬಾರದು ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News