ವೈದ್ಯ -ರೋಗಿ ಸಂಬಂಧ ಮಾನವೀಯತೆ ದ್ಯೋತಕ: ಡಾ.ಚಂದ್ರಶೇಖರ್

Update: 2019-08-23 16:01 GMT

ಉಡುಪಿ, ಆ.23: ವೈದ್ಯ ಮತ್ತು ರೋಗಿಯ ಸಂಬಂಧ ವೃತ್ತಿಪರತೆ ಮಾತ್ರ ವಲ್ಲದೇ ಮಾನವೀಯತೆಯ ದ್ಯೋತಕವೂ ಆಗಿದೆ ಎಂದು ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಹೇಳಿದ್ದಾರೆ.

ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾ ಲಯದ ಅಗದತಂತ್ರ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಇತ್ತೀಚಿಗೆ ಆಯೋಜಿಸಲಾದ ಮೆಡಿಕಲ್ ಎಥಿಕ್ಸ್ ವಿಷಯದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ ಆಚಾರ್ಯ ಮಾತ ನಾಡಿ, ವೈದ್ಯರ ನಿರ್ಲಕ್ಷದಿಂದ ರೋಗಿಯ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಇದಕ್ಕೆ ಬಿಡುವಿಲ್ಲದ ಕೆಲಸದಿಂದ ಆಗುವ ಒತ್ತಡ, ವೈದ್ಯರ ಕೌಶಲ್ಯ ಕೊರತೆ ಸೇರಿದಂತೆ ಅನೇಕ ಕಾರಣಗಳಿದ್ದು ವೈದ್ಯರು ಸದಾ ಎಚ್ಚರವಿದ್ದು ರೋಗಿಗಳ ಮಿತ್ರರಾಗಿರಬೇಕು ಎಂದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ., ಸ್ನಾತಕೋತ್ತರ ವಿಭಾಗದ ಉಪಾಧ್ಯಕ್ಷ ಡಾ.ನಾಗರಾಜ್ ಎಸ್., ಅಗದತಂತ್ರ ವಿಭಾಗದ ಮುಖ್ಯಸ್ಥೆ ಡಾ.ಚೈತ್ರಾ ಎಸ್.ಹೆಬ್ಬಾರ್ ಉಪಸ್ಥಿತರಿದ್ದರು. ಪ್ರಬಂಧ ಸ್ಪರ್ಧೆಯ ವಿಜೇತೆ ತೃತೀಯ ವರ್ಷದ ಬಿಎಎಂಎಸ್ ವಿದ್ಯಾರ್ಥಿನಿ ನವ್ಯ ಅವರಿಗೆ ಬಹು ಮಾನ ನೀಡಲಾಯಿತು.

 ಅಗದತಂತ್ರ ವಿಭಾಗದ ಸಹಪ್ರಾಧ್ಯಾಪಕ ಡಾ.ಶ್ರೀನಿಧಿ ಆರ್. ಸ್ವಾಗತಿಸಿ ದರು. ಡಾ.ಆಶ್ವೀಜ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಅಮಲ ಜ್ಯೋತಿ ಮತ್ತು ಡಾ. ಶ್ರೀಜಿತ್ ಕೆ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News