ಪಾಂಬೂರು: ಉಚಿತ ಮಕ್ಕಳ ಆರೋಗ್ಯ ತಪಸಣಾ ಶಿಬಿರ

Update: 2019-08-23 16:05 GMT

ಶಿರ್ವ, ಆ.23: ಬಂಟಕಲ್ಲು ಪಾಂಬೂರು ಮಾನಸ ವಿಶೇಷ ಮಕ್ಕಳ ಶಾಲೆ ಹಾಗೂ ಪುನರ್‌ವಸತಿ ಕೇಂದ್ರದಲ್ಲಿ ಇತ್ತೀಚೆಗೆ ಮಂಗಳೂರು ಎ.ಜೆ. ಮೆಡಿಕಲ್ ಕಾಲೇಜಿನ ತಜ್ಞ ವೈದ್ಯರ ಸಹಭಾಗಿತ್ವದಲ್ಲಿ ವಿಶೇಷ ಮಕ್ಕಳ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು.

ಶಿಬಿರವನ್ನು ಉದ್ಘಾಟಿಸಿದ ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ.ಫಾ.ಡೆನಿಸ್ ಡೇಸಾ ಮಾತನಾಡಿ, ಮನುಷ್ಯರಿಗೆ ಉತ್ತಮ ಆರೋಗ್ಯವೇ ಭಾಗ್ಯವಾಗಿದೆ. ಪದೇ ಪದೇ ಆರೋಗ್ಯ ತಪಾಸಣೆಯ ಮೂಲಕ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡುವುದು ಮುಖ್ಯ. ನೃತ್ಯ ಹಾಗೂ ಸಂಗೀತದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಬಹುದು ಎಂದರು.

ಮುಖ್ಯ ಅತಿಥಿಯಾಗಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹೆನ್ರಿ ಮಿನೇಜಸ್ ವಹಿಸಿದ್ದರು. ಟ್ರಸ್ಟಿ ಸೈಮನ್ ಡಿಸೋಜ, ಮಕ್ಕಳ ತಜ್ಞ ಡಾ.ವಿಶ್ವಾಸ್ ರಾವ್, ಮೆಡಿಸಿನ್ ವಿಭಾಗದ ಡಾ.ನಿಕಿಲ್, ಮಕ್ಕಳ ತಜ್ಞೆ ಡಾ,ಚೈತ್ರಾ ಉಪಸ್ಥಿತರಿದ್ದರು.

ಆಡಳಿತಾಧಿಕಾರಿ ಜೋಸೆಪ್ ನೋರೊನ್ನಾ ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶು ಪಾಲೆ ಸಿ.ಅನ್ಸಿಲ್ಲಾ ಫೆರ್ನಾಂಡಿಸ್ ವಂದಿಸಿದರು. ಶಾಲಿನಿ ಕಾರ್ಯಕ್ರಮ ನಿರೂ ಪಿಸಿದರು. ಆಸ್ಪತ್ರೆಯ ಶಿಬಿರಗಳ ಮುಖ್ಯ ಸಂಯೋಜಕ ನವೀನ್‌ಕುಮಾರ್, ಸಹ ಸಂಯೋಜಕ ಪ್ರವೀಣ್‌ಕುಮಾರ್, ಚರ್ಮರೋಗ ತಜ್ಞೆ ಡಾ.ರಮ್ಯಾ, ಮನೋರೋಗತಜ್ಞೆ ಡಾ.ನೀಲಾ, ವಾಕ್ ಮತ್ತು ಶ್ರವಣರೋಗ ತಜ್ಞೆ ಡಾ. ವರ್ಷಾ ಪ್ರಭು, ಫಿಜಿಯೋತೆರಫಿ ತಜ್ಞೆ ಡಾ.ನಿಮ್ಮಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News