'ಇನ್‍ಲ್ಯಾಂಡ್ ಪ್ರಾಪರ್ಟಿ ಮೇಳ 2019' : ಕೊನೆಯ ಮೂರು ದಿನಗಳು ಮಾತ್ರ

Update: 2019-08-23 17:00 GMT

ಮಂಗಳೂರು : ನಗರದ ಪ್ರಮುಖ ಕಟ್ಟಡ ನಿರ್ಮಾಣ ಸಂಸ್ಥೆಗಳಲ್ಲೊಂದಾದ ಇನ್‍ಲ್ಯಾಂಡ್ ಬಿಲ್ಡರ್ಸ್‍ನ ಎರಡನೇ ಆವೃತ್ತಿಯ 19 ದಿನಗಳ ಪ್ರಾಪರ್ಟಿ ಮೇಳವು ಇನ್ನು ಮೂರು ದಿನಗಳಲ್ಲಿ ಸಮಾಪನಗೊಳ್ಳಲಿದೆ.

ಕೊಡಿಯಾಲ್‍ಬೈಲ್‍ನ ನವಭಾರತ್ ಸರ್ಕಲ್ ಬಳಿಯ ಇನ್‍ಲ್ಯಾಂಡ್ ಆರ್ನೆಟ್‍ನ ಮೂರನೇ ಮಹಡಿಯಲ್ಲಿನ ತನ್ನ ಕಚೇರಿಯ ಆವರಣದಲ್ಲಿ ನಡೆಯುತ್ತಿದ್ದು, ಉತ್ತಮ ಜನ ಸ್ಪಂದನೆಯನ್ನು ಕಂಡಿದೆ.

ಇನ್‍ಲ್ಯಾಂಡ್ ಸಂಸ್ಥೆ 33 ವರ್ಷಗಳಿಂದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸತ್ತಿದ್ದು, ಕರಾವಳಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಪರಿಪೂರ್ಣ ದಸ್ತಾವೇಜು, ಹೊಸ ಪರಿಕಲ್ಪನೆ, ಆಕರ್ಷಕ ವಿನ್ಯಾಸ, ಆಧುನಿಕ ಸೌಲಭ್ಯ ಹಾಗೂ ಉತ್ತಮ ಗುಣಮಟ್ಟದ ವಸತಿ ಸಮುಚ್ಚಯಗಳನ್ನು ನಿಗದಿತ ಸಮಯದಲ್ಲಿ ತನ್ನ ಗ್ರಾಹಕರಿಗೆ ನೀಡುತ್ತಿದೆ.

ತನ್ನದೇ ಆದ ಸ್ವಂತ ಮನೆಯ ಮಾಲಕನಾಗಬೇಕೆಂದು ಸಾಮಾನ್ಯ ವರ್ಗದ ಪ್ರತಿಯೊಬ್ಬನ ಆಕಾಂಕ್ಷೆಯಾಗಿದ್ದು, ನಾವು ನಮ್ಮ ಗ್ರಾಹಕರ ಕನಸಿನ ಮನೆಗಳನ್ನು ನನಸಾಗಿಸಲು ಪ್ರಾಪರ್ಟಿ ಮೇಳದಂತಹ ಉತ್ತಮ ವೇದಿಕೆಯನ್ನು ನಿರ್ಮಿಸಿದ್ದೇವೆ.  60 ರಿಂದ 90 ಲಕ್ಷ ರೂಪಾಯಿಗಳ ಮನೆಗಳೇ ನಗರ ಪ್ರದೇಶಗಳಲ್ಲಿ ಕಾಣಸಿಗುತ್ತಿದ್ದು, ಸಾಮಾನ್ಯ ವರ್ಗದ ಜನರಿಗೆ ಸ್ವಂತ ಮನೆ ಹೊಂದಲು ಸಾಧ್ಯವಿಲ್ಲ ಎನ್ನುವವರಿಗೆ ಇನ್‍ಲ್ಯಾಂಡ್ ಸಂಸ್ಥೆಯ ಈ ಕೊಡುಗೆ ಆಶಾದಾಯಕವಾಗಿದೆ.

ಉತ್ತಮ ಗುಣಮಟ್ಟದ ಅಪಾರ್ಟ್‍ಮೆಂಟ್‍ಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡಿ ಕಡಿಮೆ ಆದಾಯ ಇರುವ ಜನರೂ ಸ್ವಂತ ಮನೆ ಹೊಂದ ಬೇಕೆಂಬುದು ಇನ್‍ಲ್ಯಾಂಡ್‍ನ ಆಶಯ. ನಾವು 2 ಬಿಎಚ್‍ಕೆ ಫ್ಲ್ಯಾಟನ್ನು 29 ಲಕ್ಷ ರೂ. ಹಾಗೂ 3 ಬಿಎಚ್‍ಕೆ ಫ್ಲ್ಯಾಟನ್ನು 44 ಲಕ್ಷಕ್ಕೆ ನೀಡುತ್ತಿದ್ದೇವೆ. ಇದರ ಉತ್ತಮ ಪ್ರಯೋಜನವನ್ನು ಸಾಮಾನ್ಯ ವರ್ಗದ ಜನರೂ ಪಡೆದುಕೊಂಡಿದ್ದು ತಮ್ಮದೇ ಆದ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಪ್ರಸಕ್ತ ಪೀಳಿಗೆಯು ವೃತ್ತಿಪರ ಹಾಗೂ ಮೌಲ್ಯಕ್ಕೆ ಬೆಲೆ ಕೊಡುವಂತಹವರು.  ಹೆಚ್ಚಿನವರು ವ್ಯಾಪಾರ, ಉನ್ನತ ಕಂಪೆನಿಗಳಲ್ಲಿ ಹಾಗೂ ವಿದೇಶಗಳಲ್ಲಿ ಉದ್ಯೋಗಗಳಲ್ಲಿರುತ್ತಾರೆ.  ಮನೆ ಅಥವಾ ಹೂಡಿಕೆಗಾಗಿ ಅವರು ವ್ಯಯ ಮಾಡುವ ಪ್ರತಿಯೊಂದು ರೂಪಾಯಿಯ ಮೌಲ್ಯವು ನ್ಯಾಯಯುತವಾಗಿರಲು ಬಯಸುತ್ತಾರೆ.  ಅಂತಹ ಗ್ರಾಹಕರಿಗೆ ತಾವು ಬಯಸಿದ ಮನೆಗಳನ್ನು ತರ್ಕಬದ್ಧವಾದ ಬೆಲೆಗೆ ಪಡೆಯಲು ಇದೊಂದು ಸದವಕಾಶ.

ಇನ್‍ಲ್ಯಾಂಡ್ ಸಂಸ್ಥೆಯು ಈ ಪ್ರಾಪರ್ಟಿ ಮೇಳದಲ್ಲಿ ಕಡಿಮೆ ದರದಲ್ಲಿ ಅಪಾರ್ಟ್‍ಮೆಂಟ್‍ಗಳನ್ನು ತನ್ನ ಗ್ರಾಹಕರಿಗೆ ನೀಡಿ ಸಮಾಜಕ್ಕೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ. ಇನ್‍ಲ್ಯಾಂಡ್ ಗುಣಮಟ್ಟ ಹಾಗೂ ನಂಬಿಕೆಯ ಪ್ರತೀಕ. ಗ್ರಾಹಕರ ನಿರೀಕ್ಷೆಯ ಸಾಕಾರ, ಸಂತೃಪ್ತಿ ಇನ್‍ಲ್ಯಾಂಡ್ ಸಂಸ್ಥೆಯ ಉದ್ದೇಶ ಹಾಗೂ ಧ್ಯೇಯವಾಗಿದೆಯೆಂದು ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ತಿಳಿಸಿದ್ದಾರೆ.

ರಿಯಲ್ ಎಸ್ಟೇಟ್ ಹೂಡಿಕೆಯ ಮೂಲಕ ತಮ್ಮ ಕುಟುಂಬದ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಬಯಸುತ್ತಿರುವ ಹಲವಾರು ಗ್ರಾಹಕರಿಗೆ ಉತ್ತಮ ಅವಕಾಶ. ಅಷ್ಟೇ ಅಲ್ಲ ಈ ಮೇಳವು ಸುರಕ್ಷಿತ ಆದಾಯದ ಮೂಲಕ್ಕಾಗಿ ರಿಯಲ್ ಎಸ್ಟೇಟ್‍ನಲ್ಲಿ ಹೂಡಿಕೆ ಮಾಡುವ ಜನರ ಮೇಲಿನ ನಂಬಿಕೆಯನ್ನು ಇಮ್ಮಡಿಗೊಳಿಸಿದೆ. ಮನೆ ಖರೀದಿಸ ಬಯಸುವ ಗ್ರಾಹಕರಿಗೆ ಹಣಕಾಸು ಆಯ್ಕೆಗಳಿಗೆ ಅನುಕೂಲವಾಗಲು ಕಾರ್ಪೊರೇಶನ್ ಬ್ಯಾಂಕ್ ಸಹಯೋಗದೊಂದಿಗೆ ಬ್ಯಾಂಕ್ ಲೋನ್‍ನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇನ್‍ಲ್ಯಾಂಡ್ ಬೆಂಗಳೂರು, ಮಂಗಳೂರು, ಉಳ್ಳಾಲ ಹಾಗೂ ಪುತ್ತೂರಿನಲ್ಲಿ ವಸತಿ ಮತ್ತು ವಾಣಿಜ್ಯ ಸಮುಚ್ಚಯಗಳನ್ನು ಹೊಂದಿವೆ. ಈಗಾಗಲೇ ಇನ್‍ಲ್ಯಾಂಡ್ನ ಪ್ರಮುಖ ಅಪಾರ್ಟ್‍ಮೆಂಟ್‍ಗಳು ಮಾರಾಟಗೊಂಡಿವೆ. ಇನ್ನು ಕೆಲವೇ ಅಪಾರ್ಟ್‍ಮೆಂಟ್‍ಗಳು ಮಾರಾಟಕ್ಕುಳಿದಿದ್ದು ಬೇಡಿಕೆಗಳು ಹೆಚ್ಚುತ್ತಿವೆ. 

ಇನ್ನುಳಿದ ಮೂರೇ ದಿನಗಳ ಈ ಪ್ರಾಪರ್ಟಿ ಮೇಳದ ಬೃಹತ್ ರಿಯಾಯಿತಿಯ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕೆಂದು ಇನ್‍ಲ್ಯಾಂಡ್ ಸಂಸ್ಥೆಯ ನಿರ್ದೇಶಕ ಮೆರಾಜ್ ಯೂಸುಫ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 3ನೇ ಮಹಡಿ, ಇನ್‍ಲ್ಯಾಂಡ್ ಆರ್ನೆಟ್, ನವ ಭಾರತ್ ಸರ್ಕಲ್ ಇಲ್ಲಿಗೆ ಬೆಳಗ್ಗೆ 9.30 ರಿಂದ ರಾತ್ರಿ 8.30ರ ವರೆಗೆ ಭೇಟಿ ನೀಡಬಹುದು. ಮೊ. ಸಂ. 9880138015, 9972089099, 9972014055 ಕರೆ ಮಾಡಬಹುದು. ವೆಬ್ ಸೈಟ್ www.inlandbuilders.net ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News