ಮಂಗಳೂರು: ಮಗು ಸಹಿತ ವಿವಾಹಿತ ಮಹಿಳೆ ನಾಪತ್ತೆ

Update: 2019-08-23 17:23 GMT

ಮಂಗಳೂರು, ಆ.23: ವಿವಾಹಿತ ಮಹಿಳೆ ತನ್ನ ಮಗು ಸಹಿತ ನಾಪತ್ತೆಯಾದ ಘಟನೆ ಉರ್ವ ಅಶೋಕ್‌ನಗರದಲ್ಲಿ ನಡೆದಿದೆ.

ಉತ್ತರ ಭಾರತ ಮೂಲದ, ಸದ್ಯ ಉರ್ವ ಸಮೀಪದ ಅಶೋಕ್‌ನಗರ ನಿವಾಸಿ ಪೂಜಾ ಮಹರ್ (26) ಹಾಗೂ ಪುತ್ರ ಸಾಮ್ರಾಟ್ (6) ನಾಪತ್ತೆಯಾದವರು.

ಉತ್ತರಭಾರತ ಮೂಲದ ಧೋಜ ಬಹದ್ದೂರ್ ಮಹಾರ್ ಮಂಗಳೂರಿನಲ್ಲಿ ಹಲವು ವರ್ಷಗಳಿಂದ ವಾಸವಿದ್ದರು. ವೃತ್ತಿಯಲ್ಲಿ ಚಾಲಕರಾಗಿದ್ದ ಪತಿಯು ಆ.21ರಂದು ಬೆಳಗ್ಗೆ ಕೆಲಸಕ್ಕೆ ಹೋಗಿದ್ದರು. ಸಂಜೆ ಮನೆಗೆ ವಾಪಸಾದಾಗ ಪತ್ನಿ ಸಹಿತ ಮಗು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಪತ್ನಿಯು ಮೊಬೈಲ್ ಫೋನ್‌ನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದು, ನೆರೆಹೊರೆಯವರಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಉರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News