ಮೊದಲ ಟೆಸ್ಟ್: ಆರಂಭಿಕ ಆಘಾತದಿಂದ ಭಾರತ ಚೇತರಿಕೆ

Update: 2019-08-24 11:23 GMT

ಆ್ಯಂಟಿಗುವಾ, ಆ.23: ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯದಲ್ಲಿ ಭಾರತ ಮೊದಲ ದಿನ ಆರಂಭಿಕ ಆಘಾತ ಅನುಭವಿಸಿದರೂ, ಆರಂಭಿಕ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್ ,ಉಪನಾಯಕ ಅಜಿಂಕ್ಯ ರಹಾನೆ , ಹನುಮ ವಿಹಾರಿ ಹೋರಾಟದ ಫಲವಾಗಿ ಸಾಧಾರಣ ಮೊತ್ತ ದಾಖಲಿಸಿದೆ.

ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರೂ, ಮೊದಲ ದಿನದ ಆಟ ಕೊನೆಗೊಂಡಾಗ ಭಾರತ 68.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 203 ರನ್ ಗಳಿಸಿದೆ. 20 ರನ್ ಗಳಿಸಿದ ರಿಷಭ್ ಪಂತ್ ಮತ್ತು 3 ರನ್ ಗಳಿಸಿರುವ ರವೀಂದ್ರ ಜಡೇಜ ಔಟಾಗದೆ ಕ್ರೀಸ್‌ನಲ್ಲಿದ್ದರು.

ನಾರ್ತ್‌ಸ್ಟಾಂಡ್‌ನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಯುವ ಬೌಲರ್‌ಗಳಾದ ಕೇಮರ್ ರೋಚ್ ಮತ್ತು ಶಾನನ್ ಗ್ಯಾಬ್ರಿಯಲ್ ದಾಳಿಗೆ ಸಿಲುಕಿ ಒಂದು ಹಂತದಲ್ಲಿ 25 ರನ್‌ಗಳಿಗೆ ಅಗ್ರಸರದಿಯ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ರೆಹಾನೆ ಮತ್ತು ರಾಹುಲ್ ತಂಡವನ್ನು ಆಧರಿಸಿ ನಾಲ್ಕನೇ ವಿಕೆಟ್‌ಗೆ 68 ರನ್ ಸೇರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಅಜಿಂಕ್ಯ ರಹಾನೆ ಅರ್ಧಶತಕ ದಾಖಲಿಸಿದರು. ಅವರು ಶತಕ ದಾಖಲಿಸುವ ಕನಸು ಕಂಡಿದ್ದರೂ, 81ರಲ್ಲೇ ಅವರ ಬ್ಯಾಟಿಂಗ್ ಕೊನೆಗೊಂಡಿತು. ಶಾನನ್ ಗ್ಯಾಬ್ರಿಯಲ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. 163 ಎಸೆತಗಳನ್ನು ಎದುರಿಸಿದ ರಹಾನೆ 10 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು.  

   5ನೇ ಓವರ್‌ನ 2 ಎಸೆತದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್‌ವಾಲ್ ಔಟಾಗುವ ಮೂಲಕ ಭಾರತದ ಮೊದಲ ವಿಕೆಟ್ ಪತನಗೊಂಡಿತು. ಮಾಯಾಂಕ್ ಅಗರ್‌ವಾಲ್(5) ಅವರು ಬೇಗನೆ ನಿರ್ಗಮಿಸಿದರು. ರೋಚ್ ಅವರಿಗೆ ಅವಕಾಶ ನೀಡಲಿಲ್ಲ. ಎರಡನೇ ವಿಕೆಟ್‌ಗೆ ಚೇತೇಶ್ವರ ಪೂಜಾರ ಜೊತೆಯಾದರೂ ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 5 ಓವರ್‌ಗಳಲ್ಲಿ ತಂಡದ ಸ್ಕೋರ್ 7ಕ್ಕೆ ತಲುಪುವಾಗ ಇನ್ನೊಂದು ವಿಕೆಟ್ ಪತನ. ಪೂಜಾರ ಅವರು ರೋಚ್ ಎಸೆತದಲ್ಲಿ ಶಾಹಿ ಹೋಪ್‌ಗೆ ಕ್ಯಾಚ್ ನೀಡಿದರು.  

   ನಾಯಕ ವಿರಾಟ್ ಕೊಹ್ಲಿ 9 ಎಸೆತಗಳನ್ನು ಎದುರಿಸಿ 2 ಬೌಂಡರಿಗಳ ಸಹಾಯದಿಂದ 9 ರನ್ ಗಳಿಸಿದರು. ಬಳಿಕ ಅಜಿಂಕ್ಯ ರಹಾನೆ ಅವರು ರಾಹುಲ್‌ಗೆ ಜೊತೆಯಾದರು.ಇವರು 68 ರನ್‌ಗಳ ಜೊತೆಯಾಟ ನೀಡಿದರು. ಲೋಕೇಶ್ ರಾಹುಲ್ 6 ರನ್‌ನಿಂದ ಅರ್ಧಶತಕ ವಂಚಿತಗೊಂಡರು. ಅವರು 44 ರನ್(97ಎ, 5ಬೌ)ಗಳಿಸಿ ಔಟಾದರು. ಬಳಿಕ ರಹಾನೆಗೆ ಹನುಮ ವಿಹಾರಿ ಜೊತೆಯಾದರು. ರಹಾನೆ ಮತ್ತು ಹನುಮ ವಿಹಾರಿ 82 ರನ್‌ಗಳ ಜೊತೆಯಾಟ ನೀಡಿದರು. ರಹಾನೆ ನಿರ್ಗಮಿಸಿದ ಬಳಿಕ ರಿಷಭ್ ಪಂತ್ ಕ್ರೀಸ್‌ಗೆ ಆಗಮಿಸಿದರು. ಇವರ ಜೊತೆಯಾಟ ಹೆಚ್ಚು ಇರಲಿಲ್ಲ. ರೋಚ್ ಇವರ ಜೊತೆಯಾಟ ಮುರಿದರು. ಹನುಮ ವಿಹಾರಿ 32 ರನ್(56ಎ, 5) ಗಳಿಸಿದರು.

 ರಿಷಭ್ ಪಂತ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ ತಂಡದ ಬ್ಯಾಟಿಂಗ್‌ನ್ನು ಮುಂದುವರಿಸಿ ಮುಂದೆ ವಿಕೆಟ್ ಉರುಳದಂತೆ ನೋಡಿಕೊಂಡರು.

 ಕೇಮರ್ ರೋಚ್ 34ಕ್ಕೆ 3 ವಿಕೆಟ್ , ಶಾನನ್ ಗ್ಯಾಬ್ರಿಯಲ್ 49ಕ್ಕೆ 2 ಮತ್ತು ರೋಸ್ಟನ್ ಚೇಸ್ 42ಕ್ಕೆ 1 ವಿಕೆಟ್‌ಪಡೆದರು.

ಸ್ಕೋರ್ ವಿವರ

ಭಾರತ 68.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 203 ರನ್

 ಲೋಕೇಶ್ ರಾಹುಲ್ ಸಿ ಹೋಪ್ ಬಿ ಚೇಸ್44

ಮಾಯಾಂಕ್ ಅಗರ್‌ವಾಲ್ ಸಿ ಹೋಪ್ ಬಿ ರೋಚ್ 05

ಸಿ.ಪೂಜಾರ ಸಿ ಹೋಪ್ ಬಿ ರೋಚ್02

ವಿರಾಟ್ ಕೊಹ್ಲಿ ಸಿ ಬ್ರೋಕ್ಸ್ ಬಿ ಗ್ಯಾಬ್ರಿಯಲ್09

ಅಜಿಂಕ್ಯ ರಹಾನೆ ಬಿ ಗ್ಯಾಬ್ರಿಯಲ್ 81

ಹನುಮ ವಿಹಾರಿ ಸಿ ಹೋಪ್ ಬಿ ರೋಚ್32

ರಿಷಭ್ ಪಂತ್ ಬ್ಯಾಟಿಂಗ್20

ರವೀಂದ್ರ ಜಡೇಜ ಬ್ಯಾಟಿಂಗ್03

 ಇತರ07

 ವಿಕೆಟ್ ಪತನ: 1-5, 2-7, 3-25, 4-93, 5-175, 6-189

 ಬೌಲಿಂಗ್ ವಿವರ

ಕೇಮರ್ ರೋಚ್ 17.0-6-34-3

ಶ್ಯಾನನ್ ಗ್ಯಾಬ್ರಿಯಲ್15.0-3-49-2

ಜಾಸನ್ ಹೋಲ್ಡರ್15.0-9-27-0

ಮಿಗುಲ್ ಕಮಿನ್ಸ್10.0-0-45-0

ರೋಸ್ಟನ್ ಚೇಸ್11.5-1-42-1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News