GOAT Tour 2025 | ಕಾರ್ಯಕ್ರಮದಲ್ಲಿ ಅವ್ಯವಸ್ಥೆ; ಆಯೋಜಕನ ಬಂಧನ
Update: 2025-12-13 20:54 IST
Photo Credit : PTI
ಕೋಲ್ಕತಾ: ಮೆಸ್ಸಿ ಅವರ ಕಾರ್ಯಕ್ರಮದ ಅವ್ಯವಸ್ಥೆ ಕುರಿತಂತೆ ‘ಭಾರತದ ಗೋಟ್ (ಸಾರ್ವಕಾಲಿಕ ಶ್ರೇಷ್ಠ) ಪ್ರವಾಸ’ದ ಮುಖ್ಯ ಆಯೋಜಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾರ್ಯಕ್ರಮ ಅವ್ಯವಸ್ಥೆ ಕುರಿತಂತೆ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ಮುಖ್ಯ ಆಯೋಜಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪಶ್ಚಿಮಬಂಗಳದ ಡಿಜಿಪಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಾನೂನು ಸುವ್ಯವಸ್ಥೆಯನ್ನು ಮರು ಸ್ಥಾಪಿಸಲಾಗಿದೆ. ಮೆಸ್ಸಿ ಆಟ ಆಡುವುದನ್ನು ಹಾಗೂ ಮೈದಾನದಲ್ಲಿ ಹೆಚ್ಚು ಸಮಯ ಕಳೆಯುವುದನ್ನು ನಿರೀಕ್ಷಿಸಿದ್ದರಿಂದ ಹೆಚ್ಚಿನ ಅಭಿಮಾನಿಗಳು ಅಸಮಾಧಾನಗೊಂಡರು ಎಂದು ಅವರು ಹೇಳಿದ್ದಾರೆ.