×
Ad

Gulfstream V (G-V) ವಿಲಾಸಿ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ ಲಿಯೊನೆಲ್ ಮೆಸ್ಸಿ; ಈ ವಿಮಾನದ ವಿಶೇಷತೆಯೇನು?

Update: 2025-12-13 20:48 IST

 ಲಿಯೋನೆಲ್ ಮೆಸ್ಸಿ | Photo Credit : X


ಹೊಸದಿಲ್ಲಿ: ಅರ್ಜೆಂಟೀನ ಸೂಪರ್‌ ಸ್ಟಾರ್ ಲಿಯೊನೆಲ್ ಮೆಸ್ಸಿ ಖಾಸಗಿ ‘Gulfstream V (G-V)’ ವಿಮಾನದಲ್ಲಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

Gulfstream V (G-V) ಎನ್ನುವುದು ಅತಿ ವಿಲಾಸಿ, ಅತಿ-ದೀರ್ಘ ವ್ಯಾಪ್ತಿಯ ಬಿಝ್ನೆಸ್ ದರ್ಜೆಯ ವಿಮಾನ. ಅದು 6,500 ನಾಟಿಕಲ್ ಮೈಲಿ (12,038 ಕಿ.ಮೀ.) ದೂರ ಎಲ್ಲಿಯೂ ಇಳಿಯದೆ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಅದು ನ್ಯೂಯಾರ್ಕ್‌ನಿಂದ ಟೋಕಿಯೊಗೆ ಮತ್ತು ಲಂಡನ್‌ ನಿಂದ ಸಿಂಗಾಪುರಕ್ಕೆ ಎಲ್ಲಿಯೂ ಇಳಿಯದೆ ಹಾರಬಲ್ಲದು.

ಈ ವಿಮಾನ 51,000 ಅಡಿ (15.5 ಕಿಲೋಮೀರ್) ಎತ್ತರದಲ್ಲಿ ಲೀಲಾಜಾಲವಾಗಿ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಈ ಎತ್ತರದಲ್ಲಿ ಅದಕ್ಕೆ ಹೆಚ್ಚಿನ ವಿಮಾನ ಸಂಚಾರ ಎದುರಾಗುವುದಿಲ್ಲ. ಅದು 885 ಕಿ.ಮೀ.ಗಿಂತಲೂ ಅಧಿಕ ವೇಗದಲ್ಲಿ ಸಂಚರಿಸುತ್ತದೆ.

ಬಳಸಿದ Gulfstream V (G-V) ವಿಮಾನದ ಬೆಲೆ ಅದರ ಪ್ರಾಯ, ಸ್ಥಿತಿಗತಿಯನ್ನು ಆಧರಿಸಿ ಸುಮಾರು 9 ಮಿಲಿಯ ಡಾಲರ್ (ಸುಮಾರು 81.5 ಕೋಟಿ ರೂಪಾಯಿ) ನಿಂದ 14 ಮಿಲಿಯ ಡಾಲರ್ (ಸುಮಾರು 127 ಕೋಟಿ ರೂಪಾಯಿ) ಇರುತ್ತದೆ. ಹೊಸ ವಿಮಾನದ ಬೆಲೆ 40 ಮಿಲಿಯ ಡಾಲರ್ (ಸುಮಾರು 360 ಕೋಟಿ ರೂಪಾಯಿ)ಗಿಂತ ಅಧಿಕವಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News