×
Ad

ಪ್ರಯತ್ನಕ್ಕೆ ಸಂದ ಫಲ: ಚಾಲಕನಾಗಿ ತಂದೆ ಕೆಲಸ ಮಾಡುತ್ತಿದ್ದ ಕೋರ್ಟ್ ನಲ್ಲಿ ಪುತ್ರ ಇನ್ನು ನ್ಯಾಯಾಧೀಶ!

Update: 2019-08-24 16:23 IST
Photo: ANI

ಇಂದೋರ್, ಆ.24: ಮಧ್ಯ ಪ್ರದೇಶದ ಇಂದೋರ್ ಜಿಲ್ಲಾ ನ್ಯಾಯಾಲಯದಲ್ಲಿ ಚಾಲಕರಾಗಿರುವ ಗೋವರ್ಧನ್‍ ಲಾಲ್ ಬಜದ್ ಅವರ ಪುತ್ರ ಚೇತನ್ ಬಜದ್ ಎರಡನೇ ದರ್ಜೆ ಸಿವಿಲ್ ನ್ಯಾಯಾಧೀಶ ಹುದ್ದೆಗೆ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಇದೀಗ ನ್ಯಾಯಾಧೀಶರಾಗಲು ಸಜ್ಜಾಗಿದ್ದಾರೆ.

ತಮ್ಮ ಈ ಸಾಧನೆಗೆ ತಮ್ಮ ತಂದೆಯೇ ಕಾರಣ ಎಂದು ಹೇಳುವ ಚೇತನ್, ತಂದೆ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದುದರಿಂದ ತಾನು ಕೂಡ ನ್ಯಾಯಾಂಗ ಸೇರಿ ಸಾರ್ವಜನಿಕರ ಸೇವೆ ಸಲ್ಲಿಸಲು ನಿರ್ಧರಿಸಿದ್ದಾಗಿ ತಿಳಿಸುತ್ತಾರೆ.

“ನಾನು ನ್ಯಾಯಾಧೀಶನಾಗಬೇಕು ಎಂದು  ಬಹಳ ಹಿಂದೆಯೇ ನಿರ್ಧರಿಸಿದ್ದೆ. ನಾನೀಗ ನನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ ಹಾಗೂ ನ್ಯಾಯ ದೊರಕಿಸಿ ಕೊಟ್ಟು ಸಮಾಜಕ್ಕೆ ಆದರ್ಶಪ್ರಾಯನಾಗುತ್ತೇನೆ'' ಎಂದು ಚೇತನ್ ಹೇಳಿದರು.

ಪ್ರತಿ ದಿನ 12ರಿಂದ 13 ಗಂಟೆಗಳ ಕಾಲ ಕಲಿಯುತ್ತಿದ್ದೆ ಎಂದು ಹೇಳುವ ಅವರು, “ಪ್ರತಿ ದಿನ ಬೆಳಿಗ್ಗೆ 8 ಗಂಟೆಗೆ ಗ್ರಂಥಾಲಯಕ್ಕೆ ತೆರಳಿ ರಾತ್ರಿ 9 ಗಂಟೆ ಅಥವಾ 10 ಗಂಟೆಗೆ ವಾಪಸಾಗುವ ವೇಳೆ ಮನೆಯವರೆಲ್ಲರೂ ರಾತ್ರಿಯೂಟಕ್ಕೆ ನನಗಾಗಿ ಕಾಯುತ್ತಿರುತ್ತಿದ್ದರು'' ಎಂದು ನೆನಪಿಸಿಕೊಳ್ಳುತ್ತಾರೆ.

ತನ್ನ ಪುತ್ರನ ಸಾಧನೆಯಿಂದ ಅತೀವ ಸಂತೋಷವಾಗಿದೆ ಎಂದು ಗೋವರ್ಧನ್ ಲಾಲ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News