ಮಂಗಳೂರು: 2ನೇ ದಿನವೂ ರೈಲು ಸಂಚಾರ ರದ್ದು

Update: 2019-08-24 13:01 GMT

ಮಂಗಳೂರು, ಆ.24: ದಕ್ಷಿಣ ರೈಲ್ವೆಗೆ ಸೇರಿದ ಕುಲಶೇಖರ- ಪಡೀಲ್ ರೈಲ್ವೆ ಸುರಂಗ ಮಾರ್ಗದ ಬಳಿ ಭಾರೀ ಭೂ ಕುಸಿತ ಉಂಟಾದ ಪರಿಣಾಮ ಎರಡನೇ ದಿನವೂ ರೈಲು ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿದೆ.

ಆ.25ರಂದು ಹೊರಡಬೇಕಿದ್ದ ತಿರುವನಂತಪುರಂ- ಮುಂಬೈ ಲೋಕಮಾನ್ಯ ತಿಲಕ್ ನೇತ್ರಾವತಿ ಎಕ್ಸ್‌ಪ್ರೆಸ್(16346) ಶೋರ್ನೂರ್- ಮೇಲಪ್ಪಕ್ಕಂ- ರೇಣಿಗುಂಟ- ವಾಡಿ- ಪುಣೆ- ಲೋನಾವಾಲ-ಕಲ್ಯಾಣ್ ಮಾರ್ಗವಾಗಿ ಪ್ರಯಾಣಿಸಲಿದೆ.

ಎರ್ನಾಕುಲಂ- ನಿಝಾಮುದ್ದೀನ್ ಮಂಗಳ ಲಕ್ಷದ್ವೀಪ ಎಕ್ಸ್‌ಪ್ರೆಸ್(12617) ಶೋರ್ನೂರ್- ಪೊದನೂರ್- ಈ ರೋಡ್-ಜೋಳಾರ್‌ಪೇಟೈ- ಅರಂಕೋಣಂ-ಪೆರಂಬೂರು- ಗುಡೂರ್-ನಾಗಪುರ- ಭೂಪಾಲ್- ಜಾನ್ಸಿ- ಆಗ್ರ - ಮಥುರಾ ಆಗಿ ಚಲಿಸಲಿದೆ.

ಕೊಂಕಣ ರೈಲ್ವೆಗೆ ಸೇರಿದ ಮಡಗಾಂವ್-ಮಂಗಳೂರು ಪ್ಯಾಸೆಂಜರ್ ರೈಲು(56641) ಹಾಗೂ ಷುಡಗಾಂವ್- ಮಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು(22635) ರದ್ದುಗೊಂಡಿದೆ. ತಿರುವನಂತಪುರದಿಂದ ಲೋಕಮಾನ್ಯ ತಿಲಕ್ ಟರ್ಮಿನಲ್‌ಗೆ ಸಂಚರಿಸಬೇಕಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ (16346) ಭಾಗಶಃ ರದ್ದುಗೊಂಡಿದೆ.

ನಾಗರಕೊಯಿಲ್- ಸಿಎಸ್‌ಎಂಟಿ ಎಕ್ಸ್‌ಪ್ರೆಸ್ (16340), ಮಂಗಳೂರು- ಮಡ್ಗಾಂವ್ ಪ್ಯಾಸೆಂಜರ್ ರೈಲು(56640) ಮಂಗಳೂರು ಜಂಕ್ಷನ್- ಮಡಗಾಂವ್ ಮಧ್ಯೆ ಭಾಗಶಃ ರದ್ದುಗೊಂಡಿದೆ.

ಮಂಗಳೂರು- ಮಡ್ಗಾಂವ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು(22636), ಮಡ್ಗಾಂವ್- ಮಂಗಳೂರು ಡೆಮು ರೈಲು(70105) ತೋಕೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ ಭಾಗಶಃ ರದ್ದುಗೊಂಡಿದೆ. ಮಂಗಳೂರು- ಮಡ್ಗಾಂವ್ ಡೆಮು ರೈಲು(70106), ಮಂಗಳೂರು- ಕುರ್ಲ ಮತ್ಸ್ಯಗಂಧ ಎಕ್ಸ್‌ಪ್ರೆಸ್ (12620) ರೈಲು ಮಂಗಳೂರಿನಿಂದ ಸುರತ್ಕಲ್ ಮಧ್ಯೆ ಭಾಗಶಃ ರದ್ದುಗೊಂಡಿದೆ.

ಸಿಎಸ್‌ಎಂಟಿ- ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು(12133) ಸುರತ್ಕಲ್- ಮಂಗಳೂರು ಜಂಕ್ಷನ್ ಮಧ್ಯೆ ಭಾಗಶ: ರದ್ದುಗೊಂಡಿದೆ. ಸಿಎಸ್‌ಎಂಟಿ- ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (12134) ಭಾಗಶಃ ರದ್ದುಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News