ಶಿರೂರು ಶ್ರೀ ಸ್ಮರಣಾರ್ಥ ಉಚಿತ ಉಂಡೆ, ಚಕ್ಕುಲಿ ವಿತರಣೆ

Update: 2019-08-24 14:45 GMT

ಉಡುಪಿ, ಆ.24: ಉಡುಪಿ ಜಿಲ್ಲಾ ನಾಗರೀಕ ಸಮಿತಿ, ಲಯನ್ಸ್ ಕ್ಲಬ್ ಬ್ರಹ್ಮಗಿರಿ ಹಾಗೂ ಶಿರೂರು ಶ್ರೀಗಳ ಅಭಿಮಾನಿಗಳ ಸಹಕಾರದೊಂದಿಗೆ ಶಿರೂರು ಮಠದ ಶ್ರೀಲಕ್ಷ್ಮಿವರ ತೀರ್ಥ ಸ್ವಾಮೀಜಿಯ ವಿಶಿಷ್ಟ ರೀತಿಯ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ನೆನಪಿಗಾಗಿ ಎರಡನೇ ವರ್ಷದ ಉಚಿತ ಉಂಡೆ, ಚಕ್ಕುಲಿ ವಿತರಣೆ ಕಾರ್ಯಕ್ರಮ ಉಡುಪಿ ಚಿತ್ತರಂಜನ್ ಸರ್ಕಲ್ನ ಮಾರುತಿ ವಿಥಿಕಾದ ಬಳಿ ನಡೆಯಿತು.

ಕಾರ್ಯಕ್ರಮವನ್ನು ಉಡುಪಿ ಶೋಕ ಮಾತಾ ಇಗರ್ಜಿಯ ಧರ್ಮಗುರು ಪಾ.ವೆಲೇರಿಯನ್ ಮಂಡೋನ್ಸಾ ಉದ್ಘಾಟಿಸಿದರು. ಉದ್ಯಮಿ ರಂಜನ್ ಕಲ್ಕೂರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಿರೂರು ಸ್ವಾಮೀಜಿಯ ಸಹೋದರ ಲಾತವ್ಯ ಆಚಾರ್ಯ, ಉದ್ಯಮಿ ಭಾಸ್ಕರ್ ಶೇರಿಗಾರ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಉಮೇಶ್ ನಾಯ್ಕ್, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ನ ಮ್ಯಾನೇಜರ್ ಹಫೀಝ್ ರೆಹಮಾನ್, ಮಾರ್ಕೆಟಿಂಗ್ ಮ್ಯಾನೇಜರ್ ರಾಘವೇಂದ್ರ ಅಜೆಕಾರ್, ಜೋಸ್ ಅಲುಕಾಸ್ ಮ್ಯಾನೇಜರ್ ರಾಜೇಶ್ ಎನ್.ಆರ್., ಸುಧಾಕರ ಪಾಣರ ಮೂಡುಬೆಳ್ಳೆ, ಹಿರಿಯ ನಾಗರಿಕರ ವೇದಿಕೆಯ ಅದ್ಯಕ್ಷ ಸಿ.ಎಸ್.ರಾವ್, ಚಕ್ಕುಲಿ ಉಂಡೆ ತಯಾರಿಕರಾದ ಶಂಕರ್ ನಾಯ್ಕ್, ಲಯನ್ಸ್ ಕ್ಲಬ್ ನ ವಾಸುದೇವ, ನಾಗರೀಕ ಸಮಿತಿಯ ನಿತ್ಯಾನಂದ ಒಳಕಾಡು ಮುಂತಾದವರು ಉಪಸ್ಥಿತರಿದ್ದರು.

ಬಳಿಕ ಸಾರ್ವಜನಿಕರಿಗೆ ಉಚಿತ ಲಡ್ಡು, ಚಕ್ಕುಲಿ ವಿತರಣೆ ನಡೆಯಿತು. ಒಟ್ಟು 5 ಸಾವಿರ ಉಂಡೆ ಹಾಗೂ 5 ಸಾವಿರ ಚಕ್ಕುಲಿಯನ್ನು ವಿತರಿಸಲು ವ್ಯವಸ್ಥೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News