ಸಿಪಿಐ ಹಿರಿಯ ಮುಖಂಡ ಇಮ್ಯಾನ್ಯುವೆಲ್ ಜತ್ತನ್ನ ನಿಧನ

Update: 2019-08-24 15:03 GMT

ಉಡುಪಿ, ಆ.24: ಸಿಪಿಐ ಪಕ್ಷದ ಹಿರಿಯ ಮುಖಂಡರಾದ 76ಬಡಗಬೆಟ್ಟು ಗ್ರಾಮದ ಇಂದಿರಾ ನಗರ ನಿವಾಸಿ ಇಮ್ಯಾನ್ಯುವೆಲ್ ಜತ್ತನ್ನ(91) ಆ.24 ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಸಿಪಿಐ ಪಕ್ಷದ ಉಡುಪಿ ಘಟಕದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇವರು, 76 ಬಡಗಬೆಟ್ಟು ಬೈಲೂರು ಪಂಚಾಯತ್‌ನಲ್ಲಿ ಎರಡು ಅವಧಿಗೆ ಗೆದ್ದು ಹತ್ತು ವರ್ಷಗಳ ಕಾಲ ಪಂಚಾಯತ್ ಉಪಾಧ್ಯಕ್ಷರಾಗಿ ಹಾಗೂ ಶಿವಳ್ಳಿ ನೇಕಾರ ಸಹಕಾರಿ ಸಂಸ್ಥೆಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಮೃತರು ಮಾಜಿ ನಗರಸಭಾ ಸದಸ್ಯ ಹಿಲರಿ ಜತ್ತನ್ನ ಸೇರಿದಂತೆ ಮೂವರು ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News