ಮಂಗಳೂರು: ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಪ್ರಥಮ ಪದವಿ ಪ್ರದಾನ

Update: 2019-08-24 15:13 GMT

ಮಂಗಳೂರು, ಆ.24: ಹೊಸ ಮಾದರಿಯ ತಂತ್ರಜ್ಞಾನಗಳು ಜಗತ್ತಿನಲ್ಲಿ ನೂತನ ಕ್ರಾಂತಿಯನ್ನು ಸೃಷ್ಟಿಸಿವೆ. ವೇಗವಾಗಿ ಬೆಳೆಯುತ್ತಿರುವ ಯುಗದಲ್ಲಿ ವಿದ್ಯಾರ್ಥಿಗಳೂ ಅಷ್ಟೇ ವೇಗದಿಂದ ಜ್ಞಾನಸಂಪನ್ನರಾಗಿ ಮುಂದುವರಿಯಬೇಕು ಎಂದು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಅಧ್ಯಕ್ಷ ಟಿ.ವಿ. ಮೋಹನ್‌ದಾಸ್ ಪೈ ಅಭಿಪ್ರಾಯಪಟ್ಟರು.

ನಗರದ ಟಿಎಂಎ ಪೈ ಹಾಲ್‌ನಲ್ಲಿ ಶನಿವಾರ ನಡೆದ ‘ಎಸ್‌ಡಿಎಂ ಕಾಲೇಜ್ ಆ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಪೋಸ್ಟ್ ಗ್ರಾಜ್ಯುವೇಟ್ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಆ್ಯಂಡ್ ರೀಸರ್ಚ್’ ಸಂಸ್ಥೆಯ ಪ್ರಥಮ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕಳೆದೊಂದು ದಶಕದಿಂದೀಚೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಬ್ಯಾಂಕಿಂಗ್ ರಂಗದಲ್ಲಿಯೂ ಬದಲಾವಣೆಗಳು ಘಟಿಸಿದ್ದು, ಬ್ಯಾಂಕಿಗೆ ತೆರಳದೇ ಕ್ಷಣಮಾತ್ರದಲ್ಲಿ ಒಂದೆಡೆಯಿಂದ ಇನ್ನೊಂದೆಣೆಗೆ ನಗದು ವರ್ಗಾವಣೆ ಸಾಧ್ಯವಾಗಿದೆ. ಈ ಎಲ್ಲ ಬದಲಾವಣೆಗಳಿಗೆ ತಕ್ಕಂತೆ ವಿದ್ಯಾರ್ಥಿಗಳೂ ತಮ್ಮ ಜ್ಞಾನ ಮತ್ತು ಕೌಶಲವನ್ನು ಹೆಚ್ಚಿಸಿಕೊಂಡಲ್ಲಿ ಜಗತ್ತಿನ ಯಾವುದೇ ಕಡೆಯಲ್ಲೂ ಅವಕಾಶ ಸಿಗುತ್ತದೆ. ಸಂವಹನ ಕೌಶಲ, ಕ್ಷೇತ್ರವಾರು ಸಾಮರ್ಥ್ಯವನ್ನು ರೂಢಿಸಿಕೊಂಡು ಬದುಕಿನಲ್ಲಿ ಯಶಸ್ಸಿನ ಔನತ್ಯಕ್ಕೇರುವಲ್ಲಿ ಶ್ರಮಿಸಬೇಕು ಎಂದು ಟಿ.ವಿ. ಮೋಹನ್‌ದಾಸ್ ಪೈ ನುಡಿದರು.

ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಮೂವರು ಸಾಧಕ ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಬೋಧಕ ಸಂಯೋಜಕಿ ರಮ್ಯಾ ಶೆಟ್ಟಿ ಉಪಸ್ಥಿತರಿದ್ದರು. ನಿರ್ದೇಶಕಿ ಡಾ. ಸೀಮಾ ಎಸ್. ಶೆಣೈ ವರದಿ ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News