ಉಡುಪಿ: ಲೋಕಾಯುಕ್ತದಿಂದ ದೂರುಗಳ ಆಹ್ವಾನ

Update: 2019-08-24 16:28 GMT

ಉಡುಪಿ, ಆ.24: ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ವಿಚಾರಣೆ ಬಯಸುವ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬಹುದು.

ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಹಾಗೂ ಗಂಭೀರವಲ್ಲದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ದೂರು ಅರ್ಜಿಗಳನ್ನು ಆ.27ರಂದು ಬೆಳಗ್ಗೆ 11ರಿಂದ 12:30ರವರೆಗೆ ಕಾರ್ಕಳ ಪ್ರವಾಸಿ ಮಂದಿರ, ಆ.28ರಂದು ಬೆಳಗ್ಗೆ 11ರಿಂದ 12:30ರವರೆಗೆ ಕುಂದಾಪುರ ಪ್ರವಾಸಿ ಮಂದಿರ ಹಾಗೂ ಆ.29 ರಂದು ಬೆಳಿಗ್ಗೆ 11ರಿಂದ 12:30ರವರೆಗೆ ಬೈಂದೂರು ಪ್ರವಾಸಿ ಮಂದಿರದಲ್ಲಿ ದೂರುಗಳನ್ನು ಸ್ವೀಕರಿಲಾಗುವುದು.

ಉಡುಪಿ ತಾಲೂಕಿಗೆ ಸಂಬಂದಪಟ್ಟಂತೆ ದೂರು ಅರ್ಜಿಗಳನ್ನು ನೀಡುವವರು ನೇರವಾಗಿ ಕರ್ನಾಟಕ ಲೋಕಾಯಕ್ತ ಉಡುಪಿ ಕಚೇರಿಯನ್ನು ಸಂಪರ್ಕಿಸ ಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಉಡುಪಿ, ದೂರವಾಣಿ ಸಂಖ್ಯೆ 0820-2527770, ಪೊಲೀಸ್ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ, ಉಡುಪಿ ದೂರವಾಣಿ ಸಂಖ್ಯೆ: 0820-2536661 ಸಂಪರ್ಕಿಸಬಹುದು ಎಂದು ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯು್ತ, ಉಡುಪಿ ಇವರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News