ಗ್ರೀನ್‌ಲ್ಯಾಂಡ್‌ನಲ್ಲಿ ದೂತವಾಸ ಕಚೇರಿ ತೆರೆದ ಅಮೆರಿಕ

Update: 2019-08-24 16:56 GMT

 ವಾಶಿಂಗ್ಟನ್,ಆ.24: ಡೆನ್ಮಾರ್ಕ್‌ನ ಪ್ರಾಂತವಾದ ಗ್ರೀನ್‌ಲ್ಯಾಂಡ್‌ನ್ನು ಖರೀದಿಸಲು ಪ್ರಯತ್ನಿಸುತ್ತಿರುವ ಟ್ರಂಪ್ ಆಡಳಿತವು ಅಲ್ಲಿ ಅಮೆರಿಕದ ದೂತವಾಸ ಕಚೇರಿಯೊಂದನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

ಆರ್ಕ್‌ಟಿಕ್ ವಲಯದಲ್ಲಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸುವ ವಿಸ್ತೃತ ಯೋಜನೆಯ ಅಂಗವಾಗಿ ಗ್ರೀನ್‌ಲ್ಯಾಂಡ್‌ನ ನ್ಯೂಕ್ ಪ್ರದೇಶದಲ್ಲಿ ದೂತವಾಸ ಕಚೇರಿಯೊಂದನು ಪುನರ್‌ಸ್ಥಾಪಿಸಲು ಯೋಜನೆಯನ್ನು ಹೊಂದಿರುವುದಾಗಿ ಅಮೆರಿಗದ ವಿದೇಶಾಂಗ ಇಲಾಖೆಯು, ಅಮೆರಿಕ ಕಾಂಗ್ರೆಸ್‌ಗೆ ಬರೆದ ಪತ್ರದಲ್ಲಿ ತಿಳಿಸಿದೆ.

 ಆರ್ಕ್‌ಟಿಕ್ ಪ್ರಾಂತದುದ್ದಕ್ಕೂ ರಾಜಕೀಯ, ಆರ್ಥಿಕ ಹಾಗೂ ವಾಣಿಜ್ಯ ಸಂಬಂಧಗಳನ್ನು ವೃದ್ಧಿಸಲು ವ್ಯೆಹಾತ್ಮಕ ಆಸಕ್ತಿಯನ್ನು ಅಮೆರಿಕ ಹೊಂದಿದೆಯೆಂದು, ಸೆನೆಟ್‌ನ ವಿದೇಶಾಂಗ ಸಂಬಂಧಗಳ ಸಮಿತಿಯು ಪತ್ರದಲ್ಲಿ ತಿಳಿಸಿದೆ.

ಗ್ರೀನ್‌ಲ್ಯಾಂಡ್‌ನ ಖರೀದಿಸುವ ಪ್ರಸ್ತಾವವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರ ಮುಂದಿಟ್ಟಾಗ, ಅದರ ನ್ಯಾಟೊ ಮಿತ್ರ ರಾಷ್ಟ್ರವಾದ ಡೆನ್ಮಾರ್ಕ್ ತಿರಸ್ಕರಿಸಿತ್ತು. ಗ್ರೀನ್‌ಲ್ಯಾಂಡ್‌ನ್ನು ಖರೀದಿಸುವ ಅಮೆರಿಕದ ಪ್ರಸ್ತಾವವು ಉಭಯದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾದ ಬಳಿಕ ಟ್ರಂಪ್ ಡೆನ್ಮಾಕ್ ್ರವಾಸವನ್ನು ರದ್ದುಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News